ಫಿಫಾ ವಿಶ್ವಕಪ್​ ಆರಂಭೋತ್ಸವದಲ್ಲಿ ಕುಣಿಯಲು ನೋರಾ ಫತೇಹಿ ಪಡೆದ ಸಂಭಾವನೆ ಎಷ್ಟು?

ಫಿಫಾ ವಿಶ್ವಕಪ್​ ಆರಂಭೋತ್ಸವದಲ್ಲಿ ಕುಣಿಯಲು ನೋರಾ ಫತೇಹಿ ಪಡೆದ ಸಂಭಾವನೆ ಎಷ್ಟು?
ಫಿಫಾ ವಿಶ್ವಕಪ್​ ಆರಂಭೋತ್ಸವದಲ್ಲಿ ಕುಣಿಯಲು ನೋರಾ ಫತೇಹಿ ಪಡೆದ ಸಂಭಾವನೆ ಎಷ್ಟು?
Published on
ಬೆಂಗಳೂರು: ಬಾಲಿವುಡ್​ ನಟಿ, ಡಾನ್ಸರ್​, ಗಾಯಕಿ ಹಾಗೂ ಕನ್ನಡದ ಕೆಡಿ ಸಿನಿಮಾದ ಸೆರಗು ಹಾಡಿನಿಂದ ವಿವಾದಕ್ಕೀಡಾಗಿದ್ದ ನೋರಾ ಫತೇಹಿ (Nora Fatehi) ಫಿಫಾ ವಿಶ್ವಕಪ್ (FIFA World Cup)​ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದರು. ಆರಂಭೋತ್ಸವದಲ್ಲಿ ಭಾಗವಹಿಸಿದ ಕಲಾವಿದರ ಪೈಕಿ ಭಾರತದ ಏಕೈಕ ಪ್ರತಿನಿಧಿಯಾಗಿದ್ದ ಕೆನಡಾ-ಮೊರಾಕ್ಕೊ ಮೂಲದ ನೋರಾ ಫತೇಹಿ, ಟೊರಾಂಟೊದಲ್ಲಿ ಶುಕ್ರವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಹಾಡಿ ಕುಣಿದು ಜಗತ್ತಿನ ಆಕರ್ಷಣೆಗೆ ಪಾತ್ರರಾದರು.
ಸಹ-ಆತಿಥೇಯ ಕೆನಡಾ ಸಿದ್ಧಪಡಿಸಿದ್ದ "ಸರ್​ ಸರ್​' ಧ್ಯೇಯಗೀತೆಯ ವಿಡಿಯೋದಲ್ಲೂ ಕಾಣಿಸಿಕೊಂಡಿದ್ದ ನೋರಾ ಫತೇಹಿ, ಆರಂಭೋತ್ಸವದಲ್ಲೂ ಅದೇ ಹಾಡನ್ನು ಸಂಗೀತ ನಿರ್ದೇಶಕ ವಜ್​ ಡ್ರೀಮ್​ ಮತ್ತು ಬಾಂಗ್ಲಾದೇಶ ಗಾಯಕ ಸಂಜಯ್​ ಜತೆ ಹಾಡಿ ಕುಣಿದು ಟೊರಾಂಟೊ ಸ್ಟೇಡಿಯಂನಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದ್ದರು. ಕೆನಡಾ ಮತ್ತು ಬೋಸ್ನಿಯಾ-ಹರ್ಜೆಗೋವಿನಾ ನಡುವಿನ ಪಂದ್ಯಕ್ಕೆ ಮುನ್ನ ಈ ಆರಂಭೋತ್ಸವ ನಡೆದಿತ್ತು.
ಸಿನಿಮಾದಲ್ಲಿ ಒಂದು ಐಟಂ ಸಾಂಗ್​ನಲ್ಲಿ ಕುಣಿಯಲು ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯುವ ನೋರಾ ತೇಹಿ, ಫಿಫಾ ವಿಶ್ವಕಪ್​ ಆರಂಭೋತ್ಸವದಲ್ಲಿ ನರ್ತಿಸಲು ಎಷ್ಟು ಹಣ ಪಡೆದಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಆದರೆ ನೋರಾ ಸಹಿತ ಫಿಫಾ ವಿಶ್ವಕಪ್​ ಆರಂಭೋತ್ಸವದಲ್ಲಿ ಪಾಲ್ಗೊಂಡ ಎಲ್ಲ ಸ್ಟಾರ್​ ಕಲಾವಿದರು ಮತ್ತು ಪಾಪ್​ ತಾರೆಯರು ಯಾವುದೇ ನೇರ ಸಂಭಾವನೆಯನ್ನು ಪಡೆದಿಲ್ಲ ಎನ್ನಲಾಗಿದೆ. ಇದು ಸಂಭಾವನೆ ಪಡೆದು ಪ್ರದರ್ಶನ ನೀಡುವ ಕಾರ್ಯಕ್ರಮ ಆಗಿರಲಿಲ್ಲ. ಆದರೆ ಫಿಫಾ ಇದರ ವೆಚ್ಚವನ್ನು ಟೂರ್ನಿಯ ಒಟ್ಟಾರೆ ವೆಚ್ಚದಿಂದಲೇ ಭರಿಸಲಿದೆ. ಕಲಾವಿದರ ಎಲ್ಲ ಪ್ರಯಾಣ, ವಸತಿ, ಸಿದ್ಧತೆ, ಮೇಕಪ್​ ವೆಚ್ಚವನ್ನು ಫಿಫಾ ಭರಿಸಲಿದೆ. ಜತೆಗೆ ಎಲ್ಲ ಕಲಾವಿದರಿಗೆ ಗೌರವ ಸಂಭಾವನೆಯನ್ನು ನೀಡಲಿದೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net