FIFA WorldCup: ಜಪಾನ್​ ಎದುರು ಆಘಾತದಿಂದ ಪಾರಾದ ಬ್ರೆಜಿಲ್​; ಸತತ 11ನೇ ಬಾರಿ 16ರ ಘಟ್ಟ ಪ್ರವೇಶ!

FIFA WorldCup: ಜಪಾನ್​ ಎದುರು ಆಘಾತದಿಂದ ಪಾರಾದ ಬ್ರೆಜಿಲ್​; ಸತತ 11ನೇ ಬಾರಿ 16ರ ಘಟ್ಟ ಪ್ರವೇಶ!
FIFA WorldCup: ಜಪಾನ್​ ಎದುರು ಆಘಾತದಿಂದ ಪಾರಾದ ಬ್ರೆಜಿಲ್​; ಸತತ 11ನೇ ಬಾರಿ 16ರ ಘಟ್ಟ ಪ್ರವೇಶ!
Published on
ಹ್ಯೂಸ್ಟನ್​: ಗೇಬ್ರಿಯಲ್​ ಮಾರ್ಟಿನೆಲ್ಲಿ (90+5ನೇ ನಿಮಿಷ) ಇಂಜುರಿ ಸಮಯದಲ್ಲಿ ಸಿಡಿಸಿದ ಗೋಲಿನ ನೆರವಿನಿಂದ ಐದು ಬಾರಿಯ ಚಾಂಪಿಯನ್​ ಬ್ರೆಜಿಲ್​ ತಂಡ ಫಿಫಾ ವಿಶ್ವಕಪ್ (FIFA WorldCup)​ 32ರ ಘಟ್ಟದಲ್ಲಿ ಏಷ್ಯಾದ ನಂ. 1 ಜಪಾನ್​ ಎದುರು 2-1 ಅಂತರದಿಂದ ಗೆದ್ದು ಪ್ರಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದೆ. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ದ್ವೀತಿಯಾರ್ಧದಲ್ಲಿ ತಿರುಗೇಟು ನೀಡಿದ ಸಾಂಬಾ ನಾಡಿನ ತಂಡ ಆಘಾತಕಾರಿ ಲಿತಾಂಶದಿಂದ ಪಾರಾಯಿತು. ಬ್ರೆಜಿಲ್​ಗೆ 16ರ ಘಟ್ಟದಲ್ಲಿ ಐವರಿ ಕೋಸ್ಟ್​ ಅಥವಾ ನಾರ್ವೆ ಎದುರಾಗಲಿದೆ.
ಭಾರತೀಯ ಕಾಲಮಾನ ಪ್ರಕಾರ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕೈಶು ಸಾನೋ 29ನೇ ನಿಮಿಷದಲ್ಲಿ ಸಿಡಿಸಿದ ಆಕರ್ಷಕ ಗೋಲಿನಿಂದ ಜಪಾನ್​ 1&0 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು. ಮಿಡ್​ಫೀಲ್ಡ್​ನಲ್ಲಿ ಪಾಸ್​ ವೇಳೆ ಬ್ರೆಜಿಲ್​ ಆಟಗಾರರ ಮಾಡಿದ ತಪ್ಪಿನಿಂದ ಲಾಭ ಪಡೆದು ಕೈಶು ಗೋಲು ಬಾರಿಸಿದರು. ಬಳಿಕ ದ್ವೀತಿಯಾರ್ಧದಲ್ಲಿ ಕ್ಯಾಸೆಮಿರೊ (56ನೇ ನಿಮಿಷ) ಹೆಡರ್​ ಮೂಲಕ ಬ್ರೆಜಿಲ್​ಗೆ ಸಮಬಲ ತಂದುಕೊಟ್ಟರು. ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಿಸುವ ಹಂತದಲ್ಲಿ ಮಾರ್ಟಿನೆಲ್ಲಿ ಗೆಲುವಿನ ಗೋಲು ಸಿಡಿಸಿದರು.

25 ವರ್ಷದ ಮಾರ್ಟಿನೆಲ್ಲಿ 65ನೇ ನಿಮಿಷದಲ್ಲಿ ಮ್ಯಾಥ್ಯೂಸ್​ ಕುನ್ಹಾಗೆ ಬದಲಿಗರಾಗಿ ಮೈದಾನ ಪ್ರವೇಶಿಸಿದ್ದರು. ಬ್ರೆಜಿಲ್​ ಸ್ಟಾರ್​ ಆಟಗಾರ ನೇಮರ್​ ಜೂನಿಯರ್​ ಮತ್ತೊಮ್ಮೆ ಇಡೀ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಲೀಗ್​ ಹಂತದಲ್ಲಿ 4 ಗೋಲು ಸಿಡಿಸಿದ್ದ ವಿನಿಶಿಯಸ್​ ಜೂನಿಯರ್​ ಈ ಬಾರಿ 58ನೇ ನಿಮಿಷದಲ್ಲಿ ಗೋಲು ಗಳಿಸುವ ಅತ್ಯುತ್ತಮ ಅವಕಾಶವೊಂದನ್ನು ಕೈಚೆಲ್ಲಿದರು.
*11: ಬ್ರೆಜಿಲ್​ ವಿಶ್ವಕಪ್​ನಲ್ಲಿ ಸತತ 11ನೇ ಬಾರಿ 16ರ ಟ್ಟಕ್ಕೇರಿದೆ.
*88: ಬ್ರೆಜಿಲ್​ ವಿಶ್ವಕಪ್​ ನಾಕೌಟ್​ನಲ್ಲಿ 88 ವರ್ಷಗಳ ಬಳಿಕ ಆರಂಭಿಕ ಹಿನ್ನಡೆಯ ಬಳಿಕ ಗೆಲುವು ಸಾಧಿಸಿತು. 1938ರಲ್ಲಿ ಕೊನೆಯದಾಗಿ ಜೆಕೋಸ್ಲೋವಾಕಿಯಾ ವಿರುದ್ಧ ಈ ಸಾಧನೆ ಮಾಡಿತ್ತು.
0: ಜಪಾನ್​ ವಿಶ್ವಕಪ್​ ನಾಕೌಟ್​ನಲ್ಲಿ ಒಂದೂ ಪಂದ್ಯ ಗೆಲ್ಲದ ನಿರಾಸೆ ಮುಂದುವರಿದಿದೆ. 2018, 2022ರ 16ರ ಟ್ಟದಲ್ಲೂ ಜಪಾನ್​ ಆರಂಭಿಕ ಮುನ್ನಡೆಯ ಬಳಿಕ ಸೋತಿತ್ತು.
ಬ್ರೆಜಿಲ್​: 2
*ಕ್ಯಾಸೆಮಿರೊ (56ನೇ ನಿಮಿಷ)
*ಗೇಬ್ರಿಯಲ್​ ಮಾರ್ಟಿನೆಲ್ಲಿ (90+5)
ಜಪಾನ್​: 1
*ಕೈಶು ಸಾನೋ (29)
*2: ಕ್ಯಾಸೆಮಿರೊ (34 ವರ್ಷ, 126 ದಿನ) ವಿಶ್ವಕಪ್​ನಲ್ಲಿ ಬ್ರೆಜಿಲ್​ನ 2ನೇ ಅತಿಹಿರಿಯ ಗೋಲು ಸ್ಕೋರರ್​ ಎನಿಸಿದರು. ಬೆಬೆಟೊ (34 ವರ್ಷ, 137 ದಿನ) 1998ರಲ್ಲಿ ಅತಿಹಿರಿಯರೆನಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net