ಲಾಸ್ ಏಂಜಲೀಸ್: ಫಿಫಾ ವಿಶ್ವಕಪ್ನಲ್ಲಿ (FIFA WorldCup) ಲೀಗ್ ಹಂತದ ಮೊದಲ ಸುತ್ತಿನ ಎಲ್ಲ ಪಂದ್ಯಗಳು ಪ್ರತ್ಯೇಕ ಸಮಯದಲ್ಲಿ ನಡೆದಿದ್ದರೆ, ಎಲ್ಲ 12 ಗುಂಪಿನ ಕೊನೇ ಸುತ್ತಿನ ಲೀಗ್ ಪಂದ್ಯಗಳು ಆಯಾ ಗುಂಪಿನಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ. ಫಿಫಾ ಈ ಮಾದರಿಯನ್ನು ಅನುಸರಿಸಲು ಮಹತ್ವದ ಹಿನ್ನೆಲೆ ಇದೆ. ಅಲ್ಲದೆ ಟೂರ್ನಿ ನ್ಯಾಯೋಚಿತ ಮತ್ತು ಸ್ಪರ್ಧಾತ್ಮಕವಾಗಿ ನಡೆಯುವಂತೆ ಮಾಡುವುದು ಇದರ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಮ್ಯಾಚ್ ಫಿಕ್ಸಿಂಗ್ ಮತ್ತು ಪಿತೂರಿಯನ್ನು ತಪ್ಪಿಸುವ ಗುರಿಯನ್ನೂ ಈ ವಿಧಾನ ಒಳಗೊಂಡಿದೆ.