ನವದೆಹಲಿ: ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಫಿಫಾ ವಿಶ್ವಕಪ್(FIFA WorldCup) 2026 ಟೂರ್ನಿ ಆರಂಭವಾಗಿದೆ. ಅಮೆರಿಕಾ, ಕೆನಡಾ ಮತ್ತು ಮೆಕ್ಸಿಕೋ ಜಂಟಿಯಾಗಿ ಆತಿಥ್ಯ ವಹಿಸಿರುವ ಈ ಬಾರಿಯ ವಿಶ್ವಕಪ್ ಹಲವು ವಿಶೇಷತೆಗಳನ್ನು ಹೊಂದಿದೆ. ಮೊದಲ ಬಾರಿಗೆ 48 ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 104 ಪಂದ್ಯಗಳು ನಡೆಯಲಿವೆ. ಟೂರ್ನಿಯು ಜೂನ್ 11ರಿಂದ ಜುಲೈ 19ರವರೆಗೆ ನಡೆಯಲಿದೆ.