FIFA WorldCup 2026: ಈ ಬಾರಿ ಮೂರು ಆರಂಭೋತ್ಸವ; ಪಾಪ್​ ತಾರೆಯರ ಮಿಂಚು!

FIFA WorldCup 2026: ಈ ಬಾರಿ ಮೂರು ಆರಂಭೋತ್ಸವ; ಪಾಪ್​ ತಾರೆಯರ ಮಿಂಚು!
FIFA WorldCup 2026: ಈ ಬಾರಿ ಮೂರು ಆರಂಭೋತ್ಸವ; ಪಾಪ್​ ತಾರೆಯರ ಮಿಂಚು!
Published on
ಮೆಕ್ಸಿಕೋ ಸಿಟಿ: ಫಿಫಾ ವಿಶ್ವಕಪ್​ಗೆ (FIFA WorldCup 2026) ಈ ಬಾರಿ ಮೂರು ತಂಡಗಳು ಆತಿಥ್ಯ ವಹಿಸಿಕೊಳ್ಳುತ್ತಿರುವುದರಿಂದ ಆರಂಭೋತ್ಸವವೂ ಮೂರು ಇರಲಿದೆ. ಗುರುವಾರ ಮೆಕ್ಸಿಕೋ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೆಕ್ಸಿಕೋ ಮತ್ತು ದಣ ಆಫ್ರಿಕಾ ನಡುವಿನ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ 90 ನಿಮಿಷ ಮುನ್ನ 16 ನಿಮಿಷಗಳ ವರ್ಣರಂಜಿತ ಆರಂಭೋತ್ಸವ ನಡೆಯಲಿದೆ.

ಇದರಲ್ಲಿ ಲ್ಯಾಟಿನ್​ ಅಮೆರಿಕದ ಪಾಪ್​ ತಾರೆ ಶಕೀರಾ ಟೂರ್ನಿಯ ಅಧಿಕೃತ ಧ್ಯೇಯಗೀತೆ "ಡಾಯ್​ ಡಾಯ್​'ಅನ್ನು ನೈಜೀರಿಯಾ ಗಾಯಕ ಬುರ್ನಾ ಬಾಯ್​ ಜತೆ ಹಾಡಿ, ನರ್ತಿಸಲಿದ್ದಾರೆ. ಜತೆಗೆ ಮೆಕ್ಸಿಕನ್​ ಗಾಯಕ ಅಲೆಜಾಂಡ್ರೊ ಫೆರ್ನಾಂಡೆಜ್​, ಗಾಯಕಿ ಬೆಲಿಂಡಾ, ಲೈಲಾ ಡೌನ್ಸ್​, ಕೊಲಂಬಿಯಾ ಗಾಯಕರಾದ ಜೆ. ಬಾಲ್ವಿನ್​, ರ್ಯಾನ್​ ಕ್ಯಾಸ್ಟ್ರೊ, ವೆನೆಜುವೆಲಾದ ಗಾಯಕ ಡ್ಯಾನಿ ಓಶಿಯನ್​ ಮತ್ತು ಮೆಕ್ಸಿಕೋದ ಪ್ರಸಿದ್ಧ ರಾಕ್​ ಬ್ಯಾಂಡ್​ ಮಾನಾ ಸಹ-ಕಲಾವಿದರ ಜತೆಗೆ ಸಂಗೀತ-ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮೆಕ್ಸಿಕನ್​&ಅಮೆರಿಕನ್​ ನಟಿ ಸಲ್ಮಾ ಹಯೆಕ್​ ಕೂಡ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 


ಎರಡನೇ ಆರಂಭೋತ್ಸವ ಕೆನಡಾದ ಟೊರಾಂಟೊದಲ್ಲಿ ಶುಕ್ರವಾರವೇ ನಡೆಯಲಿದೆ. ಸಹ&ಆತಿಥೇಯ ಕೆನಡಾ ಮತ್ತು ಬೋಸ್ನಿಯಾ-ಹರ್ಜೆಗೋವಿನಾ ನಡುವಿನ ಪಂದ್ಯಕ್ಕೆ ಮುನ್ನ 13 ನಿಮಿಷ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೆನಡಾ ಗಾಯಕರಾದ ಅಲೆಸ್ಸಿಯಾ ಕಾರಾ, ಜೆಸ್ಸಿ ರೆಯೆಜ್​, ಮೈಕೆಲ್​ ಬುಬ್ಲೆ, ವಿಲಿಯಂ ಪ್ರಿನ್ಸ್​, ಪ್ಯಾಲೆಸ್ತಿಯನ್​ ಗಾಯಕಿ ಎಲ್ಯನ್ನಾ, ಬಾಂಗ್ಲಾದೇಶಿ-ಅಮೆರಿಕನ್​ ಡಿಜೆ ಸಂಜಯ್​, ಫ್ರೆಂಚ್​ ಗಾಯಕ ವೆಗೆಡ್ರೀಮ್​, ಕೆನಡಾ ನಟ ವಿಲ್​ ಆರ್ನೆಟ್​ ಪ್ರದರ್ಶನ ಇರಲಿದೆ. ಕೆನಡಾ-ಅಮೆರಿಕನ್​ ಸಂಗೀತಗಾರ ಅಲಾನಿಸ್​ ಮೊರಿಸೆಟ್​ "ಓ ಕೆನಡಾ' ಮತ್ತು ಬೋಸ್ನಿಯಾದ ಅಲೆಕ್ಸಾಂಡರ್​ ಗಜಿಕ್​ "ಡ್ರಜಾವ್ನಾ ಹಿಮ್ನಾ ಬೋಸ್ನೆ ಐ ಹರ್ಸೆಗೋವಿನ್​' ಹಾಡನ್ನು ಹಾಡಿ ರಂಜಿಸಲಿದ್ದಾರೆ. 

ಮೂರನೇ ಆರಂಭೋತ್ಸವ ಶುಕ್ರವಾರ ಲಾಸ್​ ಏಂಜಲಿಸ್​ ಸ್ಟೇಡಿಯಂನಲ್ಲಿ ಸಹ-ಆತಿಥೇಯ ಅಮೆರಿಕ ಮತ್ತು ಪರಾಗ್ವೆ ನಡುವಿನ ಪಂದ್ಯಕ್ಕೆ ಮುನ್ನ ನಡೆಯಲಿದೆ. ಇದರಲ್ಲಿ ಅಮೆರಿಕನ್​ ಗಾಯಕಿ ಕೇಟ್​ ಪೆರ್ರಿ, ರ್ಯಾಪರ್ ಫ್ಯೂಚರ್​, ಬ್ರೆಜಿಲ್​ ಗಾಯಕಿ ಅನಿಟ್ಟಾ, ಥಾಯ್ಲೆಂಡ್​ ರ್ಯಾಪರ್​ ಲೀಸಾ, ನೈಜೀರಿಯಾ ರ್ಯಾಪರ್​ ರೆಮಾ ಮತ್ತು ದಣ ಆಫ್ರಿಕಾ ಗಾಯಕಿ ಟೈಲಾ ಸಂಗೀತಾ-ನೃತ್ಯ ಕಾರ್ಯಕ್ರಮದೊಂದಿಗೆ 13 ನಿಮಿಷ ಮನರಂಜನೆ ನೀಡಲಿದ್ದಾರೆ.
ನೋರಾ ಫತೇಹಿ ಮಿಂಚು
ಭಾರತದಲ್ಲಿ ನೆಲೆಸಿರುವ ಮತ್ತು ಬಾಲಿವುಡ್​ನಲ್ಲಿ ಮಿಂಚುತ್ತಿರುವ ಮೊರಾಕ್ಕೊ-ಕೆನಡಾ ಮೂಲದ ಗಾಯಕಿ, ನಟಿ ಮತ್ತು ನೃತ್ಯತಾರೆ ನೋರಾ ಫತೇಹಿ ಶುಕ್ರವಾರ ಟೊರಾಂಟೊದಲ್ಲಿ ನಡೆಯಲಿರುವ 2ನೇ ಆರಂಭೋತ್ಸವದ ವೇಳೆ ನರ್ತಿಸಲಿದ್ದಾರೆ. ಈಗಾಗಲೆ ಟೂರ್ನಿಯ ಅಧಿಕೃತ ಮ್ಯೂಸಿಕ್​ ವಿಡಿಯೋ "ಸಿರ್​ ಸಿರ್​'ನಲ್ಲಿ ಹೆಜ್ಜೆ ಹಾಕಿರುವ ನೋರಾ, ಆರಂಭೋತ್ಸವದಲ್ಲೂ ಅದೇ ಹಾಡಿಗೆ ಕುಣಿಯಲಿದ್ದಾರೆ. 
ಮೊದಲ ಆರಂಭೋತ್ಸವ ಆರಂಭ: ರಾತ್ರಿ 10.30
ನೇರಪ್ರಸಾರ: ಯುನೈಟ್​8 ಸ್ಪೋರ್ಟ್ಸ್​, ಝೀ5
ಉದ್ಘಾಟನಾ ಪಂದ್ಯ
ಮೆಕ್ಸಿಕೋ&ದಣ ಆಫ್ರಿಕಾ
ಆರಂಭ: ರಾತ್ರಿ 12.30
ಎಲ್ಲಿ: ಮೆಕ್ಸಿಕೋ ಸಿಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net