FIFA WorldCup 2026: ಲಿಯೋನೆಲ್​ ಮೆಸ್ಸಿಗೆ ಗೋಲುಗಳ ದಾಖಲೆ ಅವಕಾಶ!

FIFA WorldCup 2026: ಲಿಯೋನೆಲ್​ ಮೆಸ್ಸಿಗೆ ಗೋಲುಗಳ ದಾಖಲೆ ಅವಕಾಶ!
FIFA WorldCup 2026: ಲಿಯೋನೆಲ್​ ಮೆಸ್ಸಿಗೆ ಗೋಲುಗಳ ದಾಖಲೆ ಅವಕಾಶ!
Published on
ನ್ಯೂಜೆರ್ಸಿ: ಅರ್ಜೆಂಟೀನಾ ತಾರೆ ಲಿಯೋನೆಲ್​ ಮೆಸ್ಸಿ (Lionel Messi) ಈ ಬಾರಿ ಫಿಫಾ ವಿಶ್ವಕಪ್​ನಲ್ಲಿ ಗರಿಷ್ಠ ಗೋಲು ಸಿಡಿಸಿದ ದಾಖಲೆ ಬರೆಯುವ ಅವಕಾಶ ಹೊಂದಿದ್ದಾರೆ. ಇದುವರೆಗೆ 13 ಗೋಲು ಸಿಡಿಸಿರುವ ಅವರು, ಈ ಬಾರಿ 4 ಗೋಲು ಬಾರಿಸಿದರೆ, ಟೂರ್ನಿ ಇತಿಹಾಸದ ಸರ್ವಾಧಿಕ ಗೋಲು ಸ್ಕೋರರ್​ ಎನಿಸಲಿದ್ದಾರೆ.

ಸದ್ಯ ಜರ್ಮನಿಯ ಮಿರೋಸ್ಲಾವ್​ ಕ್ಲೋಸ್​ (16) ಈ ದಾಖಲೆ ಹೊಂದಿದ್ದಾರೆ. ಬ್ರೆಜಿಲ್​ನ ರೊನಾಲ್ಡೊ (15) ಮತ್ತು ಜರ್ಮನಿಯ ಗೆರ್ಡ್​ ಮುಲ್ಲರ್​ (14) ನಂತರದಲ್ಲಿದ್ದಾರೆ. ಇದುವರೆಗೆ 12 ಗೋಲು ಬಾರಿಸಿರುವ ಫ್ರಾನ್ಸ್​ನ ಕೈಲಿಯನ್​ ಎಂಬಾಪೆ ಕೂಡ ದಾಖಲೆ ಅವಕಾಶ ಹೊಂದಿದ್ದಾರೆ.

ಇಂಗ್ಲೆಂಡ್​ನ ಹ್ಯಾರಿ ಕೇನ್​ (8), ಬ್ರೆಜಿಲ್​ನ ನೇಮರ್​ (8) ಮತ್ತು ಪೋರ್ಚುಗಲ್​ನ ಕ್ರಿಶ್ಚಿಯಾನೊ ರೊನಾಲ್ಡೊ (8) ಈ ಬಾರಿ ಕಣದಲ್ಲಿರುವ ಇತರ ಪ್ರಮುಖ ಗೋಲು ಸ್ಕೋರರ್​ಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net