FIFA WorldCup: ಫೈನಲ್​ ಪಂದ್ಯದ ವೇಳೆ ಟಾಮ್​ ಕ್ರೂಸ್​, ಶಕೀರಾ ಮಿಂಚು!

FIFA WorldCup: ಫೈನಲ್​ ಪಂದ್ಯದ ವೇಳೆ ಟಾಮ್​ ಕ್ರೂಸ್​, ಶಕೀರಾ ಮಿಂಚು!
FIFA WorldCup: ಫೈನಲ್​ ಪಂದ್ಯದ ವೇಳೆ ಟಾಮ್​ ಕ್ರೂಸ್​, ಶಕೀರಾ ಮಿಂಚು!
Published on
ನ್ಯೂಜೆರ್ಸಿ: ಫಿಫಾ ವಿಶ್ವಕಪ್ (FIFA WorldCup) ಫೈನಲ್​ ಪಂದ್ಯಕ್ಕೆ 90 ನಿಮಿಷ ಮುನ್ನ ಅಂದರೆ ಭಾರತೀಯ ಕಾಲಮಾನ ರಾತ್ರಿ 11ರಿಂದ ಮೆಟ್​ಲೈಫ್​ ಸ್ಟೇಡಿಯಂನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ವಿಶೇಷ ಅತಿಥಿ ಟಾಮ್​ ಕ್ರೂಸ್​ ಸಹಿತ ಹಾಲಿವುಡ್​ ತಾರೆಯರು ಭಾಗವಹಿಸಲಿದ್ದಾರೆ. ಗಾಯಕರಾದ ಪೋಸ್​ ಮಲೋನ್​, ರಾಬಿ ವಿಲಿಯಮ್ಸ್​ ನಿಕೋಲ್​ ಶೆರ್ಜಿಂಗರ್​, ಲಾರಾ ಪೌಸಿನಿ ಮತ್ತು ಯುಟ್ಯೂಬ್​ ತಾರೆ ಐಶೋಸ್ಪೀಡ್​ ಕಾರ್ಯಕ್ರಮ ನೀಡಲಿದ್ದಾರೆ. ಗ್ರಾಮ್ಮಿ, ಆಸ್ಕರ್​ ಪ್ರಶಸ್ತಿ ವಿಜೇತ ಗಾಯಕಿ ಜೆನ್ನಿರ್​ ಹಡ್ಸನ್​ ಸಮಾರೋಪದಲ್ಲಿ ಅಮೆರಿಕದ ರಾಷ್ಟ್ರಗೀತೆ ಹಾಡಲಿದ್ದಾರೆ.
ಹಾಫ್​ಟೈಮ್​ ಶೋನಲ್ಲಿ ಶಕೀರಾ ಆಕರ್ಷಣೆ
ಫಿಫಾ ಇದೇ ಮೊದಲ ಬಾರಿಗೆ ಫೈನಲ್​ ಪಂದ್ಯದ ಮೊದಲಾರ್ಧದ ಬಳಿಕ ಸೂಪರ್​ ಬೌಲ್​ ಮಾದರಿಯಲ್ಲಿ "ಹಾಫ್​ಟೈಮ್​ ಶೋ' ಆಯೋಜಿಸಿದೆ. ಮೊದಲಿಗೆ ಇದನ್ನು 30 ನಿಮಿಷ ನಡೆಸಲು ನಿರ್ಧರಿಸಿದ್ದರೂ, ಇದೀಗ ಕೊನೇಕ್ಷಣದಲ್ಲಿ 17 ನಿಮಿಷಗಳಿಗೆ ತಗ್ಗಿಸಲಾಗಿದೆ. ಈ ಪೈಕಿ 11 ನಿಮಿಷ ಸಂಗೀತ ಕಾರ್ಯಕ್ರಮ ಇರಲಿದ್ದು, ಶಕೀರಾ, ಮಡೋನ್ನಾ, ಜಸ್ಟಿನ್​ ಬೀಬರ್​, ಗುಸ್ಟಾವೊ ಡುಡಾಮೆಲ್​ ಮತ್ತು ಬಿಟಿಎಸ್​ ಟೀಮ್​ ಪಾಪ್​ ಸಂಗೀತ ಸುಧೆ ಹರಿಸಲಿದ್ದಾರೆ.
ದುಬಾರಿ ಕ್ರೀಡಾ ಸ್ಪರ್ಧೆ
ಫಿಫಾ ವಿಶ್ವಕಪ್ ಫೈನಲ್​ ಪಂದ್ಯ ವಿಶ್ವದ ಅತ್ಯಂತ ದುಬಾರಿ ಕ್ರೀಡಾ ಸ್ಪರ್ಧೆ ಎನಿಸಿದೆ. ಪಂದ್ಯದ ಸರಾಸರಿ ಟಿಕೆಟ್​ ಬೆಲೆ 10.90 ಲಕ್ಷ ರೂ. ಆಗಿದೆ. ಪಂದ್ಯದ ಟಿಕೆಟ್​ಗಳ ಕನಿಷ್ಠ ಬೆಲೆ 7.17 ಲಕ್ಷ ರೂ. ಆಗಿದ್ದರೆ, ಗರಿಷ್ಠ ಬೆಲೆ 27.42 ಲಕ್ಷ ರೂ. ಆಗಿದೆ. ಪಂದ್ಯಕ್ಕೆ ಸುಮಾರು 80 ಸಾವಿರ ಪ್ರೇಕ್ಷಕರು ಹಾಜರಾಗುವ ನಿರೀಕ್ಷೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net