ಫಿಫಾ ವಿಶ್ವಕಪ್: ಮೆಸ್ಸಿ ಮತ್ತೆ ದಾಖಲೆ, ಅರ್ಜೆಂಟೀನಾ ಅಜೇಯ ಓಟ

ಫಿಫಾ ವಿಶ್ವಕಪ್: ಮೆಸ್ಸಿ ಮತ್ತೆ ದಾಖಲೆ, ಅರ್ಜೆಂಟೀನಾ ಅಜೇಯ ಓಟ
ಫಿಫಾ ವಿಶ್ವಕಪ್: ಮೆಸ್ಸಿ ಮತ್ತೆ ದಾಖಲೆ, ಅರ್ಜೆಂಟೀನಾ ಅಜೇಯ ಓಟ
Published on
ಡಲ್ಲಾಸ್: ಸೂಪರ್‌ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ (80ನೇ ನಿಮಿಷ) ಸತತ 7ನೇ ಫಿಫಾ ವಿಶ್ವಕಪ್ ಪಂದ್ಯದಲ್ಲೂ ಗೋಲು ಬಾರಿಸಿದ ದಾಖಲೆ ಬರೆಯುವುದರೊಂದಿಗೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಸತತ 3ನೇ ಗೆಲುವು ದಾಖಲಿಸಿ ಜೆ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್‌ಗೆ ಲಗ್ಗೆಯಿಟ್ಟಿದೆ. ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 3-1ರಿಂದ ಜೋರ್ಡಾನ್ ವಿರುದ್ಧ ಸುಲಭ ಗೆಲುವು ಸಾಧಿಸಿತು. ಅರ್ಜೆಂಟೀನಾಗೆ 32ರ ಘಟ್ಟದಲ್ಲಿ, ಪದಾರ್ಪಣೆಯ ಆವೃತ್ತಿಯಲ್ಲೇ ನಾಕೌಟ್‌ಗೇರಿರುವ ಸಣ್ಣ ರಾಷ್ಟ್ರ ಕೇಪ್ ವರ್ಡೆ ಎದುರಾಗಲಿದೆ.
ಕಳೆದ 2 ಪಂದ್ಯಗಳಲ್ಲೂ ಅರ್ಜೆಂಟೀನಾ ಗೆಲುವಿನಲ್ಲಿ ಮಿಂಚಿದ್ದ 39 ವರ್ಷದ ಮೆಸ್ಸಿ ಈ ಬಾರಿ ಆರಂಭಿಕ 11ರಲ್ಲಿ ಕಾಣಿಸಿಕೊಳ್ಳಲಿಲ್ಲ. ಕೊನೆಗೆ 60ನೇ ನಿಮಿಷದಲ್ಲಿ ಕಣಕ್ಕಿಳಿದ ಅವರು, 80ನೇ ನಿಮಿಷದಲ್ಲೇ ಗೋಲು ಪೆಟ್ಟಿಗೆ ಎದುರಲ್ಲೇ ಸಿಕ್ಕ ಫ್ರೀಕಿಕ್‌ನಲ್ಲಿ ಗೋಲು ಬಾರಿಸಿದರು. ಈ ಮೂಲಕ ಟೂರ್ನಿಯಲ್ಲಿ ತನ್ನ ಗೋಲಿನ ಸಂಖ್ಯೆಯನ್ನು 6ಕ್ಕೇರಿಸಿಕೊಂಡು ಗೋಲ್ಡನ್ ಬೂಟ್ ರೇಸ್‌ನಲ್ಲಿ ಮುಂಚೂಣಿಯಲ್ಲೇ ಉಳಿದರು.ವಿಶ್ವಕಪ್‌ನಲ್ಲಿ ಮೆಸ್ಸಿ ಒಟ್ಟಾರೆ ಗೋಲು ಗಳಿಕೆ 19ಕ್ಕೇರಿದೆ.
ಈ ಮುನ್ನ ಜಿಯೋವಾನಿ ಲೋ ಸೆಲ್ಸೊ (19) ಮತ್ತು ಲೌಟಾರೊ ಮಾರ್ಟಿನೆಜ್ (31) ಅರ್ಜೆಂಟೀನಾದ ಮೊದಲ 2 ಗೋಲು ಬಾರಿಸಿದರೆ, ಮೌಸಾ ಅಲ್ತಮರಿ (55) ಜೋರ್ಡಾನ್ ಪರ ಏಕೈಕ ಗೋಲು ದಾಖಲಿಸಿದರು. ಸೆಲ್ಸೊ ಕೂಡ ಫ್ರೀಕಿಕ್ ಮೂಲಕವೇ ಗೋಲು ಬಾರಿಸಿದರು. ಪಂದ್ಯಕ್ಕೆ 70,649 ಪ್ರೇಕ್ಷಕರು ಸಾಕ್ಷಿಯಾಗಿದ್ದರು. ವಿಶ್ವ ನಂ. 72 ಜೋರ್ಡಾನ್ ತಂಡ ಜೆ ಗುಂಪಿನ ಕೊನೇ ಸ್ಥಾನಿಯಾಗಿ ಹೊರಬಿದ್ದಿತು.
ಜೋರ್ಡಾನ್: 1
ಮೌಸಾ ಅಲ್ತಮರಿ (55)
ಅರ್ಜೆಂಟೀನಾ: 3
ಜಿಯೋವಾನಿ ಲೋ ಸೆಲ್ಸೊ (19)
ಲೌಟಾರೊ ಮಾರ್ಟಿನೆಜ್ (31)
ಲಿಯೋನೆಲ್ ಮೆಸ್ಸಿ (80)
72: ಮೆಸ್ಸಿ ವೃತ್ತಿಜೀವನದಲ್ಲಿ ಫ್ರೀಕಿಕ್ ಮೂಲಕ 72 ಗೋಲು ಸಿಡಿಸಿದ್ದು, ಈ ಪೈಕಿ 12 ಅರ್ಜೆಂಟೀನಾ ಪರ ಬಂದಿವೆ. ಒಟ್ಟಾರೆ ಅಂತಾರಾಷ್ಟ್ರೀಯ ುಟ್‌ಬಾಲ್‌ನಲ್ಲಿ ಮೆಸ್ಸಿ ಗೋಲು ಗಳಿಕೆ 123ಕ್ಕೇರಿದೆ.
7: ಮೆಸ್ಸಿ ಸತತ 7 ಫಿಾ ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಬಾರಿಸಿದ ಮೊದಲ ಸಾಧಕರಾಗಿದ್ದಾರೆ.
3: ಅರ್ಜೆಂಟೀನಾ ವಿಶ್ವಕಪ್‌ನಲ್ಲಿ 5ನೇ ಬಾರಿ ಗುಂಪಿನ ಎಲ್ಲ ಪಂದ್ಯ ಗೆದ್ದ ಸಾಧನೆ ಮಾಡಿತು. ಹಾಲಿ ಆವೃತ್ತಿಯಲ್ಲಿ ಮೆಕ್ಸಿಕೋ ಮತ್ತು ಫ್ರಾನ್ಸ್ ಬಳಿಕ ಈ ಸಾಧನೆ ಮಾಡಿದ 3ನೇ ತಂಡವೆನಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net