ಫಿಫಾ ವಿಶ್ವಕಪ್ 2026: ಕ್ವಾರ್ಟರ್ ಫೈನಲ್ ತಲುಪಿದ ಆ 8 ಲಕ್ಕಿ ತಂಡಗಳು ಯಾವುವು? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ...FIFA World Cup 2026

ಫಿಫಾ ವಿಶ್ವಕಪ್ 2026: ಕ್ವಾರ್ಟರ್ ಫೈನಲ್ ತಲುಪಿದ ಆ 8 ಲಕ್ಕಿ ತಂಡಗಳು ಯಾವುವು? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ...FIFA World Cup 2026
ಫಿಫಾ ವಿಶ್ವಕಪ್ 2026: ಕ್ವಾರ್ಟರ್ ಫೈನಲ್ ತಲುಪಿದ ಆ 8 ಲಕ್ಕಿ ತಂಡಗಳು ಯಾವುವು? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ...FIFA World Cup 2026
Published on

ಪ್ರಮುಖ ಮುಖ್ಯಾಂಶಗಳು

  • ಫುಟ್‌ಬಾಲ್ ಮಹಾಹಬ್ಬ ಫಿಫಾ ವಿಶ್ವಕಪ್​ನ ಕ್ವಾರ್ಟರ್ ಫೈನಲ್ ತಲುಪಿದ ಆ 8 ಲಕ್ಕಿ ತಂಡಗಳು ಯಾವುವು?
  • ಫಿಫಾ ಕ್ವಾರ್ಟರ್ ಫೈನಲ್ಸ್‌ನ ಹೈ-ವೋಲ್ಟೇಜ್ ಪಂದ್ಯಗಳ ಕಂಪ್ಲೀಟ್ ಶೆಡ್ಯೂಲ್ ಇಲ್ಲಿದೆ
  • ಭಾರತದಲ್ಲಿ ಫಿಫಾ ವಿಶ್ವಕಪ್ ಲೈವ್ ನೋಡುವುದು ಎಲ್ಲಿ? ಸೆಮಿಫೈನಲ್ ಮತ್ತು ಮಹಾಫೈನಲ್ ದಿನಾಂಕಗಳ ಸಂಪೂರ್ಣ ಮಾಹಿತಿ
  • ಜುಲೈ 9 ರಿಂದಲೇ ಶುರುವಾಗಲಿದೆ ಫಿಫಾ ವಿಶ್ವಕಪ್​ನ ಕ್ವಾರ್ಟರ್ ಫೈನಲ್ಸ್ ಹಣಾಹಣಿ
FIFA World Cup 2026 : ವಿಶ್ವದ ಅತಿ ದೊಡ್ಡ ಫುಟ್‌ಬಾಲ್ ಹಬ್ಬವಾದ 2026ರ ಫಿಫಾ ವಿಶ್ವಕಪ್ ಇದೀಗ ಅತ್ಯಂತ ರೋಚಕ ಘಟ್ಟಕ್ಕೆ ತಲುಪಿದ್ದು, ನಾಕೌಟ್ ಹಂತದ ಬಳಿಕ ಅಂತಿಮ ಎಂಟು ತಂಡಗಳ ಕ್ವಾರ್ಟರ್ ಫೈನಲ್ ಲೈನ್‌ಅಪ್ ಸಂಪೂರ್ಣವಾಗಿ ಸಿದ್ಧಗೊಂಡಿದೆ. ಬರೋಬ್ಬರಿ 48 ಬಲಿಷ್ಠ ದೇಶಗಳ ಮಹಾಕದನದೊಂದಿಗೆ ಆರಂಭವಾಗಿದ್ದ ಈ ಮೆಗಾ ಟೂರ್ನಿಯಲ್ಲಿ, ಕಳೆದ ಎರಡು ವಾರಗಳಲ್ಲಿ ನಡೆದ ಸರಣಿ ನಾಕೌಟ್ ಪಂದ್ಯಗಳಲ್ಲಿ ಬರೋಬ್ಬರಿ 40 ರಾಷ್ಟ್ರಗಳು ಟೂರ್ನಿಯಿಂದ ಹೊರಬಿದ್ದು ಕಣ್ಣೀರಿನ ವಿದಾಯ ಹೇಳಿವೆ. ಇದೀಗ ಉಳಿದಿರುವ ಕೇವಲ ಎಂಟು ದೈತ್ಯ ಫುಟ್‌ಬಾಲ್ ಪಡೆಗಳು ಜಾಗತಿಕ ಕಿರೀಟ ಮುಡಿಗೇರಿಸಿಕೊಳ್ಳಲು ಕ್ವಾರ್ಟರ್ ಫೈನಲ್ಸ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ಈ ಹೈ-ವೋಲ್ಟೇಜ್ ಪಂದ್ಯಗಳ ಕಂಪ್ಲೀಟ್ ವೇಳಾಪಟ್ಟಿ, ಸಮಯ ಮತ್ತು ಕ್ರೀಡಾಂಗಣಗಳ ಸಂಪೂರ್ಣ ವಿವರ ಇಲ್ಲಿದೆ.

ಕ್ವಾರ್ಟರ್ ಫೈನಲ್ಸ್​ಗೆ ಎಂಟ್ರಿ ಕೊಟ್ಟಿರುವ ದೇಶಗಳು ಯಾವುವು?

* ಮೊರಾಕ್ಕೊ (ಕೆನಡಾ ವಿರುದ್ಧ 3-0 ಅಂತರದಲ್ಲಿ ಜಯಗಳಿಸಿತು)
* ಫ್ರಾನ್ಸ್ (ಪರಾಗ್ವೆ ವಿರುದ್ಧ 1-0 ಅಂತರದಲ್ಲಿ ಜಯಗಳಿಸಿತು)
* ನಾರ್ವೆ (ಬ್ರೆಜಿಲ್ ವಿರುದ್ಧ 2-1 ಅಂತರದಲ್ಲಿ ಜಯಗಳಿಸಿತು)
* ಇಂಗ್ಲೆಂಡ್ (ಮೆಕ್ಸಿಕೋ ವಿರುದ್ಧ 3-2 ಅಂತರದಲ್ಲಿ ಜಯಗಳಿಸಿತು)
* ಸ್ಪೇನ್ (ಪೋರ್ಚುಗಲ್ ವಿರುದ್ಧ 1-0 ಅಂತರದಲ್ಲಿ ಜಯಗಳಿಸಿತು)
* ಬೆಲ್ಜಿಯಂ (ಯುಎಸ್ಎ ವಿರುದ್ಧ 4-1 ಅಂತರದಲ್ಲಿ ಜಯಗಳಿಸಿತು)
* ಅರ್ಜೆಂಟೀನಾ (ಈಜಿಪ್ಟ್ ವಿರುದ್ಧ 3-2 ಅಂತರದಲ್ಲಿ ಜಯಗಳಿಸಿತು)
* ಸ್ವಿಟ್ಜರ್ಲೆಂಡ್ (ಕೊಲಂಬಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಅಂತರದಲ್ಲಿ ಜಯಗಳಿಸಿತು)

ಕ್ವಾರ್ಟರ್ ಫೈನಲ್ಸ್​ ಪಂದ್ಯಗಳ ಕಂಪ್ಲೀಟ್​ ವೇಳಾಪಟ್ಟಿ

* ಫ್ರಾನ್ಸ್ vs ಮೊರಾಕ್ಕೊ– ಜುಲೈ 9 ಗುರುವಾರ, ಸಂಜೆ 4 ಗಂಟೆಗೆ (20:00 GMT) – ಬೋಸ್ಟನ್ ಸ್ಟೇಡಿಯಂ, ಯುಎಸ್
* ಸ್ಪೇನ್ vs ಬೆಲ್ಜಿಯಂ – ಜುಲೈ 10 ಶುಕ್ರವಾರ, ಮಧ್ಯಾಹ್ನ 12 ಗಂಟೆಗೆ (19:00 GMT) – ಲಾಸ್ ಏಂಜಲೀಸ್ ಸ್ಟೇಡಿಯಂ, ಯುಎಸ್
ನಾರ್ವೆ vs ಇಂಗ್ಲೆಂಡ್ – ಜುಲೈ 11 ಶನಿವಾರ, ಸಂಜೆ 5 ಗಂಟೆಗೆ (21:00 GMT) – ಮಿಯಾಮಿ ಸ್ಟೇಡಿಯಂ, ಯುಎಸ್
* ಅರ್ಜೆಂಟೀನಾ vs ಸ್ವಿಟ್ಜರ್ಲೆಂಡ್ – ಜುಲೈ 11 ಶನಿವಾರ, ರಾತ್ರಿ 8 ಗಂಟೆಗೆ (ಭಾನುವಾರ 01:00 GMT) – ಕಾನ್ಸಾಸ್ ಸಿಟಿ ಸ್ಟೇಡಿಯಂ, ಯುಎಸ್
ಸೆಮಿಫೈನಲ್​ ಪಂದ್ಯಗಳು ಯಾವಾಗ ನಡೆಯುತ್ತೆ?
2026ರ ಫಿಫಾ ವಿಶ್ವಕಪ್‌ನ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯಗಳು ಜುಲೈ 14 ಮತ್ತು ಜುಲೈ 15 ರಂದು ಆರ್ಲಿಂಗ್ಟನ್ ಹಾಗೂ ಅಟ್ಲಾಂಟಾಗಳಲ್ಲಿ ನಡೆಯಲಿವೆ. ಆ ಬಳಿಕ ಮೂರನೇ ಸ್ಥಾನಕ್ಕಾಗಿ ಜುಲೈ 18 ರಂದು ಮಿಯಾಮಿಯಲ್ಲಿ ಪಂದ್ಯ ಆಯೋಜನೆಗೊಂಡಿದ್ದು, ಜಾಗತಿಕ ಫುಟ್‌ಬಾಲ್‌ನ ಕಿಂಗ್​ ಯಾರೆಂದು ನಿರ್ಣಯಿಸುವ ಬಹುನಿರೀಕ್ಷಿತ ಮಹಾಫೈನಲ್ ಪಂದ್ಯವು ಜುಲೈ 19 ರಂದು ಇಸ್ಟ್ ರುದರ್‌ಫೋರ್ಡ್‌ನ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಜರುಗಲಿದೆ.

ವಿಶ್ವಕಪ್ ಪಂದ್ಯಗಳನ್ನು ನೀವು ಎಲ್ಲಿ ವೀಕ್ಷಿಸಬಹುದು?

ಭಾರತದಲ್ಲಿ 2026ರ ಫಿಫಾ ವಿಶ್ವಕಪ್ ಪಂದ್ಯಗಳನ್ನು ಟಿವಿಯಲ್ಲಿ ನೇರಪ್ರಸಾರ ವೀಕ್ಷಿಸಲು ಸ್ಪೋರ್ಟ್ಸ್ 18 (Sports18) ನೆಟ್‌ವರ್ಕ್ ಚಾನೆಲ್‌ಗಳನ್ನು ವೀಕ್ಷಿಸಬಹುದು. ಇನ್ನು ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ನೋಡಲು ಜಿಯೋ ಸಿನಿಮಾ (JioCinema) ಆ್ಯಪ್ ಮತ್ತು ವೆಬ್‌ಸೈಟ್‌ ಅನ್ನು ಬಳಸಬಹುದಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net