FIFA WorldCup: ಬಾಲೋಗುನ್​ ಪಂದ್ಯ ನಿಷೇಧ ಹಿಂಪಡೆದ ಫಿಫಾ; ಟ್ರಂಪ್​ ಮಧ್ಯಪ್ರವೇಶ ಕಾರಣ!

FIFA WorldCup: ಬಾಲೋಗುನ್​ ಪಂದ್ಯ ನಿಷೇಧ ಹಿಂಪಡೆದ ಫಿಫಾ; ಟ್ರಂಪ್​ ಮಧ್ಯಪ್ರವೇಶ ಕಾರಣ!
FIFA WorldCup: ಬಾಲೋಗುನ್​ ಪಂದ್ಯ ನಿಷೇಧ ಹಿಂಪಡೆದ ಫಿಫಾ; ಟ್ರಂಪ್​ ಮಧ್ಯಪ್ರವೇಶ ಕಾರಣ!
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಧ್ಯಪ್ರವೇಶ; ಫಿಫಾ ಅಧ್ಯಕ್ಷರ ಜತೆ ಮಾತುಕತೆ
  • ಬೆಲ್ಜಿಯಂ, ಯುಎಎಫ್​ಎ ತೀವ್ರ ಆಕ್ಷೇಪ, ಮೇಲ್ಮನವಿ ಸಾಧ್ಯತೆ
ಸಿಯಾಟಲ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ (Donald Trump) ಮಧ್ಯಪ್ರವೇಶಿಸಿ, ಫಿಫಾ ಅಧ್ಯಕ್ಷ ಗಿಯಾನ್ನಿ ಇನ್​ಫಾಂಟಿನೋಗೆ ಕರೆ ಮಾಡಿ ಮಾತನಾಡಿದ ಬೆನ್ನಲ್ಲೇ ಸ್ಟಾರ್​ ಆಟಗಾರ ಫೋಲಾರಿನ್​ ಬಾಲೋಗುನ್​ ರೆಡ್​ ಕಾರ್ಡ್​ ಪಡೆದ ಬಳಿಕ ಎದುರಾಗಿದ್ದ 1 ಪಂದ್ಯ ನಿಷೇಧವನ್ನು ಫಿಫಾ ಹಿಂಪಡೆದಿದೆ. ಇದರಿಂದಾಗಿ ಬಾಲೋಗುನ್​ ಬೆಲ್ಜಿಯಂ ವಿರುದ್ಧದ ಫಿಫಾ ವಿಶ್ವಕಪ್ (FIFA WorldCup) 16ರ ಘಟ್ಟದ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಆದರೆ ಫಿಫಾದ ಈ ನಿರ್ಧಾರಕ್ಕೆ ಬೆಲ್ಜಿಯಂ ತಂಡ ಮತ್ತು ಯುರೋಪ್​ ಫುಟ್​ಬಾಲ್​ ಒಕ್ಕೂಟ (ಯುಎಎಫ್​​ಎ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಈ ನಿರ್ಧಾರದ ವಿರುದ್ಧ ಬೆಲ್ಜಿಯಂ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.
ಬಾಲೋಗುನ್​ ಬೋಸ್ನಿಯಾ ವಿರುದ್ಧದ 32ರ ಘಟ್ಟದ ಪಂದ್ಯದಲ್ಲಿ ರೆಡ್​ ಕಾರ್ಡ್​ ಪಡೆದಿದ್ದರು. ಇದರಿಂದ 16ರ ಘಟ್ಟದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಆದರೆ ಟ್ರಂಪ್​, ಇನ್​ಫಾಂಟಿನೋಗೆ ಕರೆ ಮಾಡಿ ರೆಡ್​ ಕಾರ್ಡ್​ ನಿರ್ಧಾರವನ್ನು ಪರಾಮರ್ಶೆ ಮಾಡುವಂತೆ ಕೋರಿದ್ದರು. ಇದರ ಬೆನ್ನಲ್ಲೇ ಫಿಫಾ, 1 ಪಂದ್ಯ ನಿಷೇಧ ರದ್ದುಗೊಳಿಸಿದರೆ, ಫಿಫಾಗೆ ಟ್ರಂಪ್​ ಧನ್ಯವಾದ ಹೇಳಿದ್ದಾರೆ.

ಕಳೆದ 64 ವರ್ಷಗಳಲ್ಲಿ ಮೊದಲ ಬಾರಿ ರೆಡ್​ ಕಾರ್ಡ್​ ಪಡೆದ ಆಟಗಾರನಿಗೆ ಮರುಪಂದ್ಯ ಆಡುವ ಅವಕಾಶ ಲಭಿಸಿದೆ. 1962ರಲ್ಲಿ ಬ್ರೆಜಿಲ್​ ತಾರೆ ಗ್ಯಾರಿಂಚಾಗೆ ಫೈನಲ್​ ಆಡುವ ಅವಕಾಶ ಕಲ್ಪಿಸಲಾಗಿತ್ತು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net