ನಾರ್ವೆ ಗೋಲು ಕೀಪರ್ ಓರ್ಜನ್ ನೈಲ್ಯಾಂಡ್ ಗಾಳಿಯಲ್ಲಿ ಒದ್ದ ಚೆಂಡು ಅರ್ಧ ಮೈದಾನದಷ್ಟು ದೂರ ಸಾಗಿದಾಗ ಏರಿಯಲ್ ಕ್ಯಾಮರಾದ ಕೇಬಲ್ ಸ್ಪರ್ಶಿಸಿ ದಿಕ್ಕು ಬದಲಾಯಿಸಿದಂತೆ ಕಂಡಿತು. ಇಂಗ್ಲೆಂಡ್ನ ಎಲಿಯಟ್ ಆಂಡರ್ಸನ್ಗೆ ಈ ಚೆಂಡು ಸಿಕ್ಕ ಕೂಡಲೆ ಅವರು ಗೋಲುಪೆಟ್ಟಿಗೆಯತ್ತ ಮುನ್ನುಗ್ಗಿ ಬಂದರು. ಅಂತಿಮವಾಗಿ ಬೆಲ್ಲಿಂಗ್ಹ್ಯಾಂಗೆ ಚೆಂಡು ಪಾಸ್ ಆದಾಗ ಅವರು ಅದನ್ನು ಗೋಲಾಗಿಸಿದರು. ಆದರೆ ಚೆಂಡು ಕೇಬಲ್ಗೆ ಸ್ಪರ್ಶಿಸಿದಾಗಲೇ ಆಟ ಅಲ್ಲಿಗೆ ಸ್ಥಗಿತಗೊಂಡು, ಪುನರಾರಂಭ ಕಾಣಬೇಕಾಗಿತ್ತು. ಹೀಗಾಗಿ ಈ ಗೋಲು ಅಮಾನ್ಯವಾಗಬೇಕಿತ್ತು ಎಂಬ ವಾದ ಕೇಳಿಬಂದಿತು.
ನಾರ್ವೆ ಆಟಗಾರರು ಗೋಲಿಗೆ ಆಕ್ಷೇಪ ಎತ್ತಿದರೂ, ರೆಫ್ರಿ ಅದನ್ನು ಮಾನ್ಯಗೊಳಿಸಿದರು. ಬಳಿಕ ಸ್ಪಷ್ಟನೆ ನೀಡಿದ ಫಿಫಾ, ಚೆಂಡು ಕೇಬಲ್ಗೆ ಸ್ಪರ್ಶಿಸಿದ ಬಗ್ಗೆ ಅದರಲ್ಲಿನ ಸೆನ್ಸರ್ನಿಂದ ಯಾವುದೇ ಮಾಹಿತಿ ದಾಖಲಾಗಿಲ್ಲ. ಹೀಗಾಗಿ ಗೋಲು ಮಾನ್ಯಗೊಂಡಿದೆ ಎಂದಿದೆ.