17ನೇ ಬಾರಿ ಡುರಾಂಡ್​ ಕಪ್​ ಗೆದ್ದ ಈಸ್ಟ್​ ಬೆಂಗಾಲ್​

17ನೇ ಬಾರಿ ಡುರಾಂಡ್​ ಕಪ್​ ಗೆದ್ದ ಈಸ್ಟ್​ ಬೆಂಗಾಲ್​
17ನೇ ಬಾರಿ ಡುರಾಂಡ್​ ಕಪ್​ ಗೆದ್ದ ಈಸ್ಟ್​ ಬೆಂಗಾಲ್​
Published on

ಕೋಲ್ಕತ: ಎಡ್ಮಂಡ್​ ಲಾಲ್ರಿಂಡಿಕ (11, 22, 44ನೇ ನಿಮಿಷ) ಹ್ಯಾಟ್ರಿಕ್​ ಗೋಲು ಸಾಧನೆಯ ನೆರವಿನಿಂದ ಈಸ್ಟ್​ ಬೆಂಗಾಲ್​ ತಂಡ ಪ್ರತಿಷ್ಠಿತ ಡುರಾಂಡ್​ ಕಪ್ (

Durand Cup

)​ ಟೂರ್ನಿಯಲ್ಲಿ 17ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.

ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಈಸ್ಟ್​ ಬೆಂಗಾಲ್​ ತಂಡ ಮೋಹನ್​ ಬಾಗನ್​ ವಿರುದ್ಧ 4-1 ಅಂತರದಿಂದ ಗೆಲುವು ದಾಖಲಿಸಿತು. ಇದರಿಂದ ಈಸ್ಟ್​ ಬೆಂಗಾಲ್​ ತಂಡ 135 ವರ್ಷಗಳ ಇತಿಹಾಸವಿರುವ ಟೂರ್ನಿಯಲ್ಲಿ 22 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಾಧನೆ ಮಾಡಿತು.

2004ರಲ್ಲಿ ಕೊನೆಯದಾಗಿ ಮೋಹನ್​ ಬಾಗನ್​ ತಂಡವನ್ನೇ ಮಣಿಸಿ ಚಾಂಪಿಯನ್​ ಆಗಿದ್ದ ಈಸ್ಟ್​ ಬೆಂಗಾಲ್​ ತಂಡ, ಸರ್ವಾಧಿಕ 17 ಬಾರಿ ಡುರಾಂಡ್​ ಕಪ್​ ಗೆದ್ದಿರುವ ಮೋಹನ್​ ಬಾಗನ್​ ದಾಖಲೆಯನ್ನೂ ಸರಿಗಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net