ದಕ್ಷಿಣ ವಲಯವೇ ಫೇವರಿಟ್ ಎನಿಸಿದರೂ, ಇಶಾನ್ ಕಿಶನ್ ಸಾರಥ್ಯದ ಪೂರ್ವ ವಲಯ ಹಾಲಿ ಚಾಂಪಿಯನ್ ಕೇಂದ್ರ ವಲಯವನ್ನು ಮಣಿಸಿ ಫೈನಲ್‌ಗೇರಿದೆ. 15 ವರ್ಷದ ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಶಾಬಾಜ್ ಅಹ್ಮದ್ ಸವಾಲೊಡ್ಡುವ ನಿರೀಕ್ಷೆ ಇದೆ. ಭಾರತ ತಂಡಕ್ಕೆ ಮರಳುವ ಹೋರಾಟದಲ್ಲಿರುವ ಮೊಹಮದ್ ಶಮಿ ಜತೆಗೆ ಅನುಕೂಲ್ ರಾಯ್, ಮುಕೇಶ್ ಕುಮಾರ್ ಬೌಲಿಂಗ್ ವಿಭಾಗಕ್ಕೆ ಶಕ್ತಿ ನೀಡಲಿದ್ದಾರೆ.