ಟೂರ್ನಮೆಂಟ್‌ನ ಗ್ರೂಪ್ ಸ್ಟೇಜ್ ಪಂದ್ಯಗಳ ಟಿಕೆಟ್‌ಗಳ ದರಗಳು 140ರಿಂದ 2,735 ಡಾಲರ್ ವರೆಗೆ ಇರಲಿವೆ. ಅಂತಿಮ ಪಂದ್ಯದ ಟಿಕೆಟ್‌ಗಳ ಬೆಲೆಗಳು ಆರಂಭದಲ್ಲಿ 4,185 ಮತ್ತು 8,680 ಡಾಲರ್ನಡುವೆ ಇತ್ತು. ಆದರೆ, ಏಪ್ರಿಲ್‌ನಲ್ಲಿ, ಫಿಫಾ ಅತ್ಯಧಿಕ ಬೆಲೆ ವರ್ಗಕ್ಕೆ ಅಂದರೆ, 10,990 ಡಾಲರ್ ಬೆಲೆಯನ್ನು ಫಿಕ್ಸ್ ಮಾಡಿದೆ. ಈ ಏರಿಕೆಯು ಕಳೆದ 32 ವರ್ಷಗಳಲ್ಲಿ ಹಣದುಬ್ಬರವನ್ನು ಮಾತ್ರವಲ್ಲದೆ, ಜಾಗತಿಕ ಕ್ರೀಡಾ ಆರ್ಥಿಕತೆಯಲ್ಲಿನ ಮೂಲಭೂತ ಬದಲಾವಣೆಯನ್ನೂ ಎತ್ತಿಹಿಡಿದಿದೆ.