ಭಾರತೀಯ ಕಾಲಮಾನ ಪ್ರಕಾರ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕ 11ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತು. ಕಳೆದ ಪಂದ್ಯದ ಹೀರೋ ಫೋಲಾರಿನ್ ಬಾಲೋಗುನ್, ರಿಕಾರ್ಡೊ ಪೆಪಿಗೆ ಪಾಸ್ ಮಾಡಿದ ಚೆಂಡನ್ನು ತಡೆಯಲು ಅಡ್ಡ ಬಂದ ಆಸೀಸ್ ಡಿಫೆಂಡರ್ ಕ್ಯಾಮರೂನ್ ಬರ್ಗೆಸ್ ಆಕಸ್ಮಿಕವಾಗಿ ತಮ್ಮ ತಂಡದ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಒದ್ದು ಸ್ವಗೋಲಿನ ಪ್ರಮಾದ ಎಸಗಿದರು. ಬಳಿಕ 43ನೇ ನಿಮಿಷದಲ್ಲಿ ಅಮೆರಿಕ ತಂಡದ ಅತಿ ಕಿರಿಯ ಆಟಗಾರರೆನಿಸಿರುವ 21 ವರ್ಷದ ಅಲೆಕ್ಸ್ ಫ್ರೀಮನ್ ಮುನ್ನಡೆಯನ್ನು 2-0ಕ್ಕೆ ವಿಸ್ತರಿಸಿದರು.
ಮೊದಲಿಗೆ ಆಫ್ಸೈಡ್ ನೀಡಲಾದ ಈ ಗೋಲು, ವಿಎಆರ್ ಪರಾಮರ್ಶೆಯ ಬಳಿಕ ಮಾನ್ಯಗೊಂಡಿತು. ಅಲೆಕ್ಸ್ ಸೂಪರ್ಬೌಲ್ ಚಾಂಪಿಯನ್ ಆಂಟೋನಿಯೊ ಫ್ರೀಮನ್ ಪುತ್ರರಾಗಿದ್ದಾರೆ.