ವಿಶ್ವಕಪ್ ಇತಿಹಾಸದಲ್ಲಿ ರೊನಾಲ್ಡೊ ಅವರ ಸುದೀರ್ಘ ಪಯಣವನ್ನು ಗಮನಿಸಿದರೆ, 2006 ರ ಪದಾರ್ಪಣೆ ಟೂರ್ನಿಯಲ್ಲಿ ಪೋರ್ಚುಗಲ್ 4ನೇ ಸ್ಥಾನ ಪಡೆದಿತ್ತು. ಆ ಬಳಿಕ 2010 ರಲ್ಲಿ ರೌಂಡ್ ಆಫ್ 16, 2014 ರಲ್ಲಿ ಗ್ರೂಪ್ ಹಂತ ಹಾಗೂ 2018 ರಲ್ಲಿ ಪ್ರಿ-ಕ್ವಾರ್ಟರ್‌ಫೈನಲ್ಸ್‌ನಿಂದ ತಂಡ ಹೊರಬಿದ್ದಿತ್ತು. ಕಳೆದ 2022 ರ ಆವೃತ್ತಿಯಲ್ಲಿ ತಂಡ ಕ್ವಾರ್ಟರ್‌ಫೈನಲ್ ತಲುಪಿದರೂ, ರೊನಾಲ್ಡೊ ಅವರ ಸಾಂಪ್ರದಾಯಿಕ ಎದುರಾಳಿ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾಗೆ ವಿಶ್ವಕಪ್ ಗೆದ್ದುಕೊಡುವ ಮೂಲಕ ಸಾರ್ವಕಾಲಿಕ ಶ್ರೇಷ್ಠ (GOAT) ಚರ್ಚೆಗೆ ಬಹುತೇಕ ತೆರೆ ಎಳೆದಿದ್ದರು.