ಬಿಎಫ್‌ಸಿ vs ಮೊಹಮ್ಮದನ್ ಎಸ್‌ಸಿ; ಗೆಲುವಿನ ಹಾದಿಯತ್ತ ಬೆಂಗಳೂರು!

ಬಿಎಫ್‌ಸಿ vs ಮೊಹಮ್ಮದನ್ ಎಸ್‌ಸಿ; ಗೆಲುವಿನ ಹಾದಿಯತ್ತ ಬೆಂಗಳೂರು!
ಬಿಎಫ್‌ಸಿ vs ಮೊಹಮ್ಮದನ್ ಎಸ್‌ಸಿ; ಗೆಲುವಿನ ಹಾದಿಯತ್ತ ಬೆಂಗಳೂರು!
Published on
ಬೆಂಗಳೂರು: ಈ ಸೀಸನ್‌ನ ತಮ್ಮ ಮೊದಲ Away ಪಂದ್ಯಕ್ಕಾಗಿ ಬೆಂಗಳೂರು ಎಫ್‌ಸಿ ತಂಡ ಕೋಲ್ಕತ್ತಾಕ್ಕೆ ಪ್ರಯಾಣಿಸಿದೆ. ಮಾರ್ಚ್ 7 ರಂದು ಸಂಜೆ 5 ಗಂಟೆಗೆ ಕಿಶೋರ್ ಭಾರತಿ ಕ್ರೀಡಾಂಗಣದಲ್ಲಿ (KBK) ಮೊಹಮ್ಮದನ್ ಎಸ್‌ಸಿ ತಂಡವನ್ನು ಬೆಂಗಳೂರು ಎಫ್‌ಸಿ ಎದುರಿಸಲಿದೆ. ಕಳೆದ ವಾರ ಕ್ರಮವಾಗಿ ಪಂಜಾಬ್ ಎಫ್‌ಸಿ ಮತ್ತು ಮೋಹನ್ ಬಗಾನ್ ಸೂಪರ್ ಜೈಂಟ್ (MBSG) ವಿರುದ್ಧ ಸೋಲನುಭವಿಸಿದ ಉಭಯ ತಂಡಗಳು, ಶನಿವಾರದ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಲು ಉತ್ಸುಕವಾಗಿವೆ.
ರೆನೆಡಿ ಸಿಂಗ್ ಅವರ ತಂಡವು ಕಳೆದ ಪಂದ್ಯದಲ್ಲಿ ಪಂಜಾಬ್ ಎಫ್‌ಸಿ ವಿರುದ್ಧ ಈ ಸೀಸನ್‌ನ ಮೊದಲ ಸೋಲನ್ನು
ಅನುಭವಿಸಿತ್ತು. ಇತ್ತ, ಇಂಡಿಯನ್ ಸೂಪರ್ ಲೀಗ್‌ನಲ್ಲಿ (ISL) ಈವರೆಗೆ ಗೆಲುವಿನ ಖಾತೆ ತೆರೆಯದ ಮೊಹಮ್ಮದನ್ ಎಸ್‌ಸಿ, ಕಳೆದ ಪಂದ್ಯದಲ್ಲಿ ಮೋಹನ್ ಬಗಾನ್ ವಿರುದ್ಧ 5-1 ಅಂತರದ ಭಾರಿ ಸೋಲನ್ನು ಕಂಡಿತ್ತು.
ಕೋಚ್ ರೆನೆಡಿ ಸಿಂಗ್ ಮಾತನಾಡಿ, ಮೊಹಮ್ಮದನ್ ಎಸ್‌ಸಿ ತಂಡವು ಮೋಹನ್ ಬಗಾನ್ ಮತ್ತು ಎಫ್‌ಸಿ ಗೋವಾ ವಿರುದ್ಧ
ಅತ್ಯುತ್ತಮವಾಗಿ ಆಡಿದ್ದು, ನಮ್ಮ ವಿರುದ್ಧವೂ ಅವರು ಕಠಿಣ ಪೈಪೋಟಿ ನೀಡಲಿದ್ದಾರೆ ಎಂದರು.
ಯುವ ಆಟಗಾರ ವಿನಿತ್ ವೆಂಕಟೇಶ್ ಮಾತನಾಡಿ, ಕೋಚ್ ಬಯಸಿದ ಯಾವುದೇ ಸ್ಥಾನದಲ್ಲಿ ಆಡಲು ನಾನು ಸಿದ್ಧನಿದ್ದೇನೆ. ತಂಡಕ್ಕಾಗಿ ನನ್ನ ಪಾತ್ರವನ್ನು ನಿರ್ವಹಿಸಲು ನಾನು ಯಾವಾಗಲೂ ಸಿದ್ಧ ಎಂದು ತಿಳಿಸಿದರು. ಅನುಭವಿ ಆಟಗಾರ ರಾಹುಲ್ ಭೇಕೆ ಬೆಂಗಳೂರು ಎಫ್‌ಸಿ ತಂಡಕ್ಕೆ ಮರಳಿದ್ದು, ನಾಳೆಯ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಉಪಸ್ಥಿತಿಯು ತಂಡದ ರಕ್ಷಣಾ ವಿಭಾಗಕ್ಕೆ ಹೆಚ್ಚಿನ ಬಲ ತುಂಬಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net