ಅಟ್ಲಾಂಟಾ: ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ 0-2 ಹಿನ್ನಡೆಯಿಂದ ಪುಟಿದೆದ್ದು, ಈಜಿಪ್ಟ್ ತಂಡಕ್ಕೆ 3-2 ಅಂತರದಿಂದ ಸೋಲುಣಿಸುವ ಮೂಲಕ ಫಿಫಾ ವಿಶ್ವಕಪ್ನಲ್ಲಿ (FIFA WorldCup) ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟಿದೆ. ಎಂಜೊ ಫೆರ್ನಾಂಡೆಜ್ (90+2ನೇ ನಿಮಿಷ) ಇಂಜುರಿ ಸಮಯದಲ್ಲಿ ಅರ್ಜೆಂಟೀನಾಗೆ ಗೆಲುವಿನ ಗೋಲು ಒದಗಿಸಿ, ಸತತ 2ನೇ ಪ್ರಶಸ್ತಿ ಜಯಿಸುವ ಆಸೆ ಜೀವಂತವಿಟ್ಟರು.