ಈ ಎಲ್ಲಾ ಬೆಳವಣಿಗೆಗಳ ನಡುವೆ, ಗೋಲ್ಡನ್ ಬೂಟ್ ರೇಸ್‌ನಲ್ಲಿ ಮೆಸ್ಸಿ ಮತ್ತು ಎಂಬಪ್ಪೆ ವಿರುದ್ಧ ಪೈಪೋಟಿ ನಡೆಸುತ್ತಿರುವ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಭರವಸೆಯ ಮಾತುಗಳನ್ನಾಡಿದ್ದಾರೆ. ಈ ಪಂದ್ಯದ ಸುತ್ತಲಿರುವ ಯಾವುದೇ ಭಾವನಾತ್ಮಕ ಒತ್ತಡಗಳಿಗೆ ತಮ್ಮ ತಂಡವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಬ್ಬ ಆಟಗಾರನ ದೃಷ್ಟಿಕೋನದಿಂದ ನೋಡುವುದಾದರೆ, ಇದು ಕೇವಲ ನಮಗೆ ಮತ್ತು ಒಂದು ಬಲಿಷ್ಠ ತಂಡದ ನಡುವಿನ ಹೋರಾಟವಷ್ಟೇ. ಅವರು ಚಾಣಾಕ್ಷರು, ತಾಂತ್ರಿಕವಾಗಿ ಪ್ರಬಲರು, ಹೇಗೆ ಫೌಲ್‌ಗಳನ್ನು ಪಡೆಯಬೇಕು ಮತ್ತು ಪಂದ್ಯದ ವೇಗವನ್ನು ಹೇಗೆ ನಿಧಾನಗೊಳಿಸಬೇಕು ಎಂದು ತಿಳಿದಿರುವ ತಂಡವಾಗಿದೆ ಎಂದು ಐಟಿವಿ (ITV) ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹ್ಯಾರಿ ಕೇನ್ ತಿಳಿಸಿದ್ದಾರೆ, (ಏಜೆನ್ಸೀಸ್).