

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಕಳೆದ ಮೂರು ತಿಂಗಳಿಂದ ಕ್ರೀಡಾ ಚಟುವಟಿಕೆಯೇ ಬಂದ್ ಆಗಿದೆ. ಮನೆ ಮುಂದೆ ಆಟವಾಡುತ್ತಿದ್ದ ಕಂದಮ್ಮಗಳೂ ಮನೆಯಲ್ಲೇ ಲಾಕ್ ಆಗಿವೆ. ಫುಟ್‌ಬಾಲ್ ವೀಕ್ಷಕ ವಿವರಣೆಗಾರ ಜೊ ಮೊರಿಸನ್ ಟ್ವಿಟರ್‌ನಲ್ಲಿ 12 ಸೆಕೆಂಡ್‌ಗಳ ತಮಾಷೆ ವಿಡಿಯೋ ಪ್ರಕಟಿಸುವ ಮೂಲಕ ಪ್ರಸಕ್ತ ಘಟನೆಗೆ ಹೋಲಿಸಿದ್ದಾರೆ. ಪುಟ್ಟ ಬಾಲಕನೊಬ್ಬ ಫ್ರಿಕ್‌ಕಿಕ್ ಮಾಡಲು ದೂರದಿಂದ ಓಡಿ ಬಂದರೂ ಸಾಧ್ಯವಾಗದೇ ಬೀಳುತ್ತಾನೆ. ಈ ವೇಳೆ ಅಲ್ಲಿ ನೆರೆದಿದ್ದ ಆತನ ಸಹಪಾಠಿಗಳು ಬಿದ್ದು ಬಿದ್ದು ನಗುವ ವಿಡಿಯೋ ಇದೀಗ ವೈರಲ್ ಆಗಿದೆ. ‘ಈ ವಿಡಿಯೋ ಕಥೆ ಏನಂದರೆ, ಎಷ್ಟು ದೂರ ಓಡುತ್ತೀರಿ ಎಂಬುದು ಮುಖ್ಯವಲ್ಲ. ಎಲ್ಲರೂ ನಿಮ್ಮ ದಿನವನ್ನು ಚೆನ್ನಾಗಿ ಎಂಜಾಯ್ ಮಾಡಿ’ ಎಂದು ಟ್ವಿಟರ್‌ನಲ್ಲಿ ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ.