ಐಸಿಸಿ ವರ್ಷದ ಟಿ20 ತಂಡಕ್ಕೆ ಟೀಮ್ ಇಂಡಿಯಾ ಸ್ಫೋಟಕ ಬ್ಯಾಟರ್ ಸಾರಥ್ಯ: ಜೈಸ್ವಾಲ್, ಅರ್ಷದೀಪ್‌ಗೂ ಸ್ಥಾನ

New-Project-15-1
Published on

ನವದೆಹಲಿ: ಪಾದದ ಗಾಯದಿಂದ ಶಸಚಿಕಿತ್ಸೆಗೆ ಒಳಪಟ್ಟು ಚೇತರಿಕೆ ಹಾದಿಯಲ್ಲಿರುವ ಟೀಮ್ ಇಂಡಿಯಾ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, 2023ರಲ್ಲಿ ತೋರಿದ ಅದ್ಭುತ ನಿರ್ವಹಣೆಯ ಲವಾಗಿ ಐಸಿಸಿ ವರ್ಷದ ಟಿ20 ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷವೂ ತಂಡದಲ್ಲಿ ಸ್ಥಾನ ಪಡೆದಿದ್ದ ವಿಶ್ವ ನಂ.1 ಬ್ಯಾಟರ್ ಈ ಬಾರಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದ್ದಾರೆ. ಅರಂಭಿಕ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ಎಡಗೈ ವೇಗಿ ಅರ್ಷದೀಪ್ ಸಿಂಗ್ ತಂಡದಲ್ಲಿರುವ ಇತರ ಭಾರತೀಯರು. ಜಿಂಬಾಬ್ವೆಯ ಇಬ್ಬರು, ಉಗಾಂಡ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್‌ನ ತಲಾ ಒಬ್ಬರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡದ ಒಬ್ಬ ಆಟಗಾರನೂ ತಂಡದಲ್ಲಿಲ್ಲ.

33 ವರ್ಷದ, ಸೂರ್ಯಕುಮಾರ್ 2023ರಲ್ಲಿ ಆಡಿದ 17 ಇನಿಂಗ್ಸ್‌ಗಳಲ್ಲಿ 155.95 ಸರಾಸರಿಯಲ್ಲಿ 733 ರನ್ ಬಾರಿಸಿದ್ದು, ಇದರಲ್ಲಿ ಎರಡು ಶತಕಗಳು ಸೇರಿವೆ. ಹಾರ್ದಿಕ್ ಪಾಂಡ್ಯ ಹಾಗೂ ಹಿರಿಯ ಆಟಗಾರರ ಗೈರಿನಲ್ಲಿ ಟೀಮ್ ಇಂಡಿಯಾ ಟಿ20 ತಂಡವನ್ನು ಮುನ್ನಡೆಸಿದ್ದ ಸೂರ್ಯ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯಿಸಿದರೆ, ದ.ಆಫ್ರಿಕಾ ಎದುರು ಸಮಬಲ ಸಾಧಿಸಿದರು. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಡಿದ 14 ಇನಿಂಗ್ಸ್‌ಗಳಲ್ಲಿ 430 ರನ್‌ಗಳಿಸಿದ್ದಾರೆ. ಸ್ಪಿನ್ನರ್ ರವಿ ಬಿಷ್ಣೋಯಿ, 11 ಇನಿಂಗ್ಸ್‌ಗಳಲ್ಲಿ 18 ವಿಕೆಟ್ ಪಡೆದು ವರ್ಷದ ಟಿ20 ತಂಡದಲ್ಲಿರುವ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್ ಎನಿಸಿದ್ದಾರೆ. ಮೂರನೇ ವೇಗಿಯಾಗಿ ಸ್ಥಾನ ಪಡೆದಿರುವ ಅರ್ಷದೀಪ್ ಸಿಂಗ್ ಆಡಿದ 21 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದಾರೆ.

ಐಸಿಸಿ ವರ್ಷದ ಟಿ20 ತಂಡ: ಯಶಸ್ವಿ ಜೈಸ್ವಾಲ್, ಫಿಲ್ ಸಾಲ್ಟ್, ನಿಕೋಲಸ್ ಪೂರನ್ (ವಿ.ಕೀ), ಸೂರ್ಯಕುಮಾರ್ ಯಾದವ್ (ನಾಯಕ), ಮಾರ್ಕ್ ಚಾಪ್‌ಮನ್, ಸಿಕಂದರ್ ರಾಜಾ, ಅಲ್ಪೇಶ್ ರಾಮ್‌ಜನಿ, ಮಾರ್ಕ್ ಅದೀರ್, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್, ರಿಚರ್ಡ್ ಎನ್‌ಗವರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net