ಟೀಮ್ ಇಂಡಿಯಾ ಪರ ಆಡಿರುವ 25 ಕ್ರಿಕೆಟಿಗರಿಗೆ ಫಿಟ್ನೆಸ್ ಟೆಸ್ಟ್; ಪಾಸಾದರಷ್ಟೇ ಐಪಿಎಲ್?

ipl players web
Published on

ಬೆಂಗಳೂರು: ಪ್ರಸಕ್ತ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡದಿರುವ ಸುಮಾರು 25 ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಮುಂಬರುವ ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರಿಶೀಲನಾ ಶಿಬಿರದಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಸೂಚಿಸಿದೆ. 10 ದಿನಗಳ ಶಿಬಿರದಲ್ಲಿ ಫಿಟ್ನೆಸ್ ಸಾಬೀತು ಪಡಿಸುವ ಕ್ರಿಕೆಟಿಗರಿಗೆ ಮಾತ್ರ ಐಪಿಎಲ್‌ನಲ್ಲಿ ಆಡಲು ಅವಕಾಶ ಲಭಿಸುವ ನಿರೀಕ್ಷೆ ಇದೆ.

ಕೆಎಲ್ ರಾಹುಲ್, ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್, ಭುವನೇಶ್ವರ್, ಋತುರಾಜ್ ಗಾಯಕ್ವಾಡ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರವಿ ಬಿಷ್ಣೋಯಿ ಹರ್ಷಲ್ ಪಟೇಲ್, ಆವೇಶ್ ಖಾನ್ ಮುಂತಾದ ಆಟಗಾರರು ಈ ಶಿಬಿರದಲ್ಲಿ ಈಗಾಗಲೆ ಪಾಲ್ಗೊಂಡಿದ್ದಾರೆ.

ರಣಜಿ ಟ್ರೋಫಿಯಲ್ಲಿ ಆಡಿದ ಕೆಲ ಆಟಗಾರರು ಶೀಘ್ರದಲ್ಲೇ ಶಿಬಿರ ಕೂಡಿಕೊಳ್ಳಲಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಶೀಘ್ರದಲ್ಲೇ ಈ ಶಿಬಿರಕ್ಕೆ ಹಾಜರಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net