ಸ್ಪೇನ್‌ಗೆ ಚೊಚ್ಚಲ ಮಹಿಳಾ ಫುಟ್ ಬಾಲ್ ವಿಶ್ವ ಕಿರೀಟ

sp
Published on

ಸಿಡ್ನಿ: ನಾಯಕಿ ಓಲ್ಗಾ ಕಾರ್ಮೋನಾ (29ನೇ ನಿಮಿಷ) ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ ಮಹಿಳೆಯರ ಫಿಾ ವಿಶ್ವಕಪ್ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಚಾಂಪಿಯನ್ ಪಟ್ಟವೇರಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಅಂತರದಿಂದ ಯುರೋಪಿಯನ್ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿತು. ಇದರೊಂದಿಗೆ ಪುರುಷ-ಮಹಿಳಾ ವಿಭಾಗದಲ್ಲಿ ಫುಟ್ ಬಾಲ್ ವಿಶ್ವ ಚಾಂಪಿಯನ್ ಪಟ್ಟವೇರಿದ 2ನೇ ತಂಡವೆನಿಸಿತು. 2010ರಲ್ಲಿ ಪುರುಷರ ವಿಭಾಗದಲ್ಲಿ ಸ್ಪೇನ್ ಚಾಂಪಿಯನ್ ಆಗಿತ್ತು. ಜರ್ಮನಿ ಪುರುಷ-ಮಹಿಳಾ ಫಿಫಾ ವಿಶ್ವಕಪ್ ಗೆದ್ದ ಮೊದಲ ತಂಡವಾಗಿದೆ. 23 ವರ್ಷದ ಓಲ್ಗಾ ಫೈನಲ್ ಹಾಗೂ ಸೆಮಿಫೈನಲ್ನಲ್ಲಿ ಗೋಲು ಸಿಡಿಸಿದ ಎರಡನೇ ಆಟಗಾರ್ತಿ ಎನಿಸಿದರು. 2015ರಲ್ಲಿ ಅಮೆರಿಕದ ಕಾರ್ಲಿ ಲಾಯ್ಡ ಈ ಸಾಧನೆ ಮಾಡಿದ ಮೊದಲಿಗರೆನಿಸಿದ್ದರು.

ಪಂದ್ಯದ 29ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸ್ಪೇನ್‌ಗೆ ಮುನ್ನಡೆ ಒದಗಿಸಿದ ಓಲ್ಗಾ, ಈ ಗೋಲನ್ನು ಇತ್ತಿಚೇಗೆ ಆಗಲಿದ ಗೆಳತಿಯ ತಾಯಿಗೆ ಅರ್ಪಿಸಿದರು. 16ನೇ ನಿಮಿಷದಲ್ಲಿ ಇಂಗ್ಲೆಂಡ್‌ಗೆ ಗೋಲುಗಳಿಸುವ ಉತ್ತಮ ಅವಕಾಶ ಲಭಿಸಿತು ಆದರೆ ಲೌರೆನ್ ಹೆಂಪ್ ಗೋಲು ಪೆಟ್ಟಿಗೆಯತ್ತ ಬಾರಿಸಿದ ಚೆಂಡು ಕ್ರಾಸ್ ಬಾರ್‌ಗೆ ತಗುಲಿ ಹೊರ ಚಿಮ್ಮಿತ್ತು. ಮೊದಲಾರ್ಧದ ಮುನ್ನಡೆಯನ್ನು ಕಾಯ್ದುಕೊಂಡ ಸ್ಪೇನ್ ದ್ವಿತೀಯಾರ್ಧದಲ್ಲಿ ಮುನ್ನಡೆ ಹಿಗ್ಗಿಸುವಲ್ಲಿ ದೊರೆತ ಅವಕಾಶದಲ್ಲಿ ಗೋಲುಗಳಿಸಲು ವಿಲವಾಯಿತು. 68ನೇ ನಿಮಿಷದಲ್ಲಿ ಜೆನ್ನಿ ಹೆರ್ಮೊಸೊ ಪೆನಾಲ್ಟಿ ಅವಕಾಶ ಪಡೆದರು, ಇಂಗ್ಲೆಂಡ್‌ನ ಗೋಲು ಕೀಪರ್ ಮೇರಿ ಇಯರ್ಪ್ಸ್ ಯಶಸ್ವಿಯಾಗಿ ತಡೆದರು.

ಟೂರ್ನಿಯ ೇವರೇಟ್ ಆಗಿ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡ ಪಂದ್ಯದ ಅಂತಿಮ ನಿಮಿಷದವರೆಗೂ ಸಮಬಲಕ್ಕೆ ಪೈಪೋಟಿ ನಡೆಸಿದರು ಯಶ ಕಾಣಲಿಲ್ಲ. ಇಂಗ್ಲೆಂಡ್ ತಂಡದ ಕೋಚ್ ಸರಿನಾ ವೆಗ್ಯಾಮ್ ಸತತ ಎರಡನೇ ಫಿಾ ವಿಶ್ವಕಪ್ ೈನಲ್‌ನಲ್ಲಿ ನಿರಾಸೆ ಕಂಡರು. 2019ರಲ್ಲಿ ನೆದರ್ಲೆಂಡ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರೂ,ಫೈನಲ್ನಲ್ಲಿ ಅಮೆರಿಕ ಎದುರು 0-2 ವಿರುದ್ಧ ಎಡವಿತ್ತು. ರೋಚಕ ೈನಲ್ ಪಂದ್ಯಕ್ಕೆ 75 ಸಾವಿರ ಪ್ರೇಕ್ಷಕರು ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net