ಬಿರ್ಸಾ ಮುಂಡಾ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪುರುಷರ 5 ಸಾವಿರ ಮೀ. ಓಟದಲ್ಲಿ ಶಿವಾಜಿ ಪರಶುರಾಮ್ 14 ನಿಮಿಷ, 14.43 ಸೆಕೆಂಡ್ಗಳಲ್ಲಿ ಮೊದಲಿಗರಾಗಿ ಸ್ಪರ್ಧೆ ಮುಗಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಬೆಂಗಳೂರಿನ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವನ್ನು (ಎನ್ಸಿಒಇ) ಪ್ರತಿನಿಧಿಸಿದ ಸಿಂಚಲ್ ಕಾವೇರಮ್ಮಮಹಿಳೆಯರ 400 ಮೀ. ಹರ್ಡಲ್ಸ್ನಲ್ಲಿ 57.77 ಸೆಕೆಂಡ್ಗಳಲ್ಲಿ ಓಡಿ ರಜತ ಪದಕ ಗೆದ್ದುಕೊಂಡರು. ಜೆಎಸ್ಡಬ್ಲ್ಯು ಪ್ರತಿನಿಧಿಸಿದ ಅಭಿನಯಾ ಶೆಟ್ಟಿ ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ 1.73 ಮೀ. ಎತ್ತರ ಜಿಗಿಯುವ ಮೂಲಕ ಕಂಚಿನ ಪದಕ ಜಯಿಸಿದರು.