PHOTOS | ಅಪ್ಪನಿಗೆ ಥ್ಯಾಂಕ್ಸ್ ಹೇಳಿದ ಕ್ರೀಡಾತಾರೆಯರು

fathers (1)
Published on

ಬೆಂಗಳೂರು: ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್ಣಿನ ರೆಪ್ಪೆಯಂತೆ ಕಾಯುವವನು ಅಪ್ಪ. ಕ್ರೀಡಾಪಟುಗಳ ವೃತ್ತಿಜೀವನದ ಬೆಳವಣಿಗೆಯಲ್ಲೂ ಅಪ್ಪನ ಪಾತ್ರ ಪ್ರಮುಖವಾಗಿರುತ್ತದೆ. ಕ್ರೀಡಾ ಅಕಾಡೆಮಿಗಳಿಗೆ ಸೇರಿಸುವುದರಿಂದ ಹಿಡಿದು, ಕ್ರೀಡೆಗಳ ಆಯ್ಕೆಯ ವಿಚಾರದಲ್ಲೂ ಅಪ್ಪನ ಕೆಲ ನಿರ್ಧಾರಗಳೇ ಕ್ರೀಡಾಪಟುಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುತ್ತದೆ. ಅಂಥ ಅಮೂಲ್ಯ ಪಾತ್ರ ನಿರ್ವಹಿಸಿದ ಅಪ್ಪನಿಗೆ ಕ್ರೀಡಾತಾರೆಯರು ಭಾನುವಾರ ವಿಶ್ವ ಅಪ್ಪನ ದಿನದಂದು ಥ್ಯಾಂಕ್ಸ್ ಹೇಳಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಪ್ಪನ ಜತೆಗಿನ ಬಾಲ್ಯದ ಚಿತ್ರವೊಂದನ್ನು ಟ್ವೀಟಿಸಿ ಧನ್ಯವಾದ ಹೇಳಿದ್ದಾರೆ. ‘ನಿಮ್ಮ ಅಪ್ಪನ ಪ್ರೀತಿಗೆ ಕೃತಜ್ಞರಾಗಿರುವಂತೆ ಈ ಅಪ್ಪನ ದಿನದಂದು ನಾನು ಕೇಳಿಕೊಳ್ಳುತ್ತೇನೆ. ಆದರೆ ಜೀವನದಲ್ಲಿ ಮುನ್ನಡೆಯುವಾಗ ಯಾವಾಗಲೂ ನಿಮ್ಮದೇ ಆದ ದಾರಿಯಲ್ಲಿ ನಡೆಯಿರಿ. ನೀವೆಂದೂ ಹಿಂದಿರುಗಿ ನೋಡುವ ಪ್ರಸಂಗ ಬರುವುದಿಲ್ಲ. ಯಾಕೆಂದರೆ, ಅಪ್ಪ ಯಾವಾಗಲೂ ನಿಮ್ಮನ್ನು ಗಮನಿಸುತ್ತಿರುತ್ತಾನೆ. ದೈಹಿಕವಾಗಿ ಅವರು ನಿಮ್ಮೊಂದಿಗೆ ಇರಲಿ, ಇಲ್ಲದಿರಲಿ. ಹ್ಯಾಪಿ ಾದರ್ಸ್‌ ಡೇ’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಕೂಡ ಅಪ್ಪನ ಚಿತ್ರ ಟ್ವೀಟಿಸಿ ಅಪ್ಪನ ದಿನದ ಶುಭಾಶಯ ತಿಳಿಸಿದ್ದಾರೆ.

ಟೀಮ್ ಇಂಡಿಯಾ ಕೋಚ್ ರವಿಶಾಸಿ, ಕ್ರಿಕೆಟ್ ಸಹೋದರರಾದ ಯೂಸುಫ್​ ಪಠಾಣ್-ಇರ್ಫಾನ್​ ಪಠಾಣ್, ಕೃನಾಲ್ ಪಾಂಡ್ಯ-ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ, ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಪಿವಿ ಸಿಂಧು ಕೂಡ ಅಪ್ಪನ ಚಿತ್ರವನ್ನು ಟ್ವೀಟಿಸಿ ಥ್ಯಾಂಕ್ಸ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net