ಕೊಹ್ಲಿ, ಧೋನಿ, ರೋಹಿತ್ ಹುಡುಗಿಯರಾಗಿದ್ದರೆ ಹೇಗೆ ಕಾಣುತ್ತಿದ್ದರು ಗೊತ್ತೇ?

Virat-Dhoni-Rohit
Published on

ಬೆಂಗಳೂರು: ಟೀಮ್ ಇಂಡಿಯಾದ ಕ್ರಿಕೆಟಿಗರು ಹುಡುಗಿಯರಾಗಿದ್ದರೆ ಹೇಗೆ ಕಾಣುತ್ತಿದ್ದರು ಎಂಬ ಚಿತ್ರಗಳು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ, ಕೆಎಲ್ ರಾಹುಲ್ ಸಹಿತ ಪ್ರಮುಖ ಕ್ರಿಕೆಟಿಗರು ಹುಡುಗಿಯರಾಗಿ ಜನಿಸುತ್ತಿದ್ದರೆ ಎಷ್ಟೊಂದು ಸುಂದರಿಯರಾಗಿ ಕಾಣಿಸುತ್ತಿದ್ದರು ಎಂಬ ಚಿತ್ರಗಳು ಕ್ರಿಕೆಟ್ ಪ್ರೇಮಿಗಳ ಮುಖದಲ್ಲಿ ನಗು, ಅಚ್ಚರಿಗಳನ್ನು ತಂದಿದೆ. ಅವರ ಸೌಂದರ್ಯಕ್ಕೆ ಕ್ರಿಕೆಟ್​ ಪ್ರೇಮಿಗಳು ಮರುಳಾಗಿದ್ದಾರೆ.

ವಿರಾಟ್​ ಕೊಹ್ಲಿ

ರೋಹಿತ್ ಕಾಲೆಳೆದ ಚಾಹಲ್

ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ ಹುಡುಗಿಯಾಗಿದ್ದರೆ ಹೇಗೆ ಕಾಣುತ್ತಿದ್ದರು ಎಂಬ ಚಿತ್ರವನ್ನು ಸಹ-ಆಟಗಾರ ಹಾಗೂ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಟ್ವೀಟಿಸಿ ಕಾಲೆಳೆದಿದ್ದಾರೆ. ‘ರೋಹಿತಾ ಶರ್ಮ ನೀವು ಸಾಕಷ್ಟು ಕ್ಯೂಟ್ ಆಗಿ ಕಾಣಿಸುತ್ತಿದ್ದೀರಿ’ ಎಂದು ಚಾಹಲ್ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ರೋಹಿತ್ ಶರ್ಮ ಅಭಿಮಾನಿಗಳು ಚಾಹಲ್ ಹುಡುಗಿಯಾಗಿದ್ದರೆ ಹೇಗಿರುತ್ತಿದ್ದರು ಎಂಬ ಚಿತ್ರವನ್ನೂ ಟ್ವೀಟಿಸಿ ತಮಾಷೆ ಮಾಡಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ

ಯಜುವೇಂದ್ರ ಚಾಹಲ್​

ಭುವನೇಶ್ವರ್ ​ಕುಮಾರ್​

ಕರ್ನಾಟಕದ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಕೂಡ, ಟೀಮ್ ಇಂಡಿಯಾ ಕ್ರಿಕೆಟಿಗರು ಹುಡುಗಿಯರಾಗಿದ್ದರೆ ಹೇಗೆ ಕಾಣುತ್ತಿದ್ದರೆಂಬ ಚಿತ್ರವನ್ನು ಟ್ವೀಟಿಸಿದ್ದು, ‘ಭುವನೇಶ್ವರ್ ಕುಮಾರ್ ನಿಜಕ್ಕೂ ಹುಡುಗಿಯಾಗಿದ್ದರೆ ನಾನೇ ಅವರನ್ನು ಮದುವೆಯಾಗುತ್ತಿದ್ದೆ’ ಎಂದು ಬರೆದುಕೊಂಡಿದ್ದಾರೆ.

ಆರ್​. ಅಶ್ವಿನ್​

ಕೆಎಲ್ ರಾಹುಲ್​

ಹಾರ್ದಿಕ್​ ಪಾಂಡ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net