ಹೋಳ್ಕರ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಮತ್ತು ಇತಿಹಾಸ

Cricket 25 Dec 19
Published on

ನಂಬರ್ 1 ಬೌಲರ್: ಜಸ್​ಪ್ರೀತ್ ಬುಮ್ರಾ ಇನ್ನೊಂದು ವಿಕೆಟ್ ಪಡೆದರೆ, ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಬೌಲರ್ ಎನಿಸಲಿದ್ದಾರೆ. ಸದ್ಯ ಬುಮ್ರಾ 43 ಪಂದ್ಯಗಳಿಂದ 51 ವಿಕೆಟ್ ಉರುಳಿಸಿ 2ನೇ ಸ್ಥಾನದಲ್ಲಿದ್ದರೆ, ಯಜುವೇಂದ್ರ ಚಾಹಲ್ (36 ಪಂದ್ಯ, 52 ವಿಕೆಟ್), ಆರ್.ಅಶ್ವಿನ್ (46 ಪಂದ್ಯ, 52 ವಿಕೆಟ್) ಜಂಟಿ ಅಗ್ರಸ್ಥಾನದಲ್ಲಿದ್ದಾರೆ. 

ಏಕೈಕ ಪಂದ್ಯ ಗೆದ್ದಿದ್ದ ಭಾರತ: ಹೋಳ್ಕರ್ ಸ್ಟೇಡಿಯಂನಲ್ಲಿ ಈವರೆಗೂ ಏಕೈಕ ಟಿ20 ಪಂದ್ಯ ನಡೆದಿದೆ. 2017ರ ಡಿಸೆಂಬರ್ 22 ರಂದು ಭಾರತ-ಶ್ರೀಲಂಕಾ ತಂಡವೇ ಇಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ 88 ರನ್​ಗಳಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮ 43 ಎಸೆತಗಳಲ್ಲಿ 118 ರನ್ ಬಾರಿಸಿದ್ದರೆ, ಕೆಎಲ್ ರಾಹುಲ್ 49 ಎಸೆತಗಳಿಂದ 89 ರನ್ ಸಿಡಿಸುವ ಮೂಲಕ ಭಾರತ 260 ರನ್ ಪೇರಿಸಲು ನೆರವಾಗಿದ್ದರು. ಇದು ಟಿ20ಯಲ್ಲಿ ಭಾರತದ ಈವರೆಗಿನ ಗರಿಷ್ಠ ಮೊತ್ತ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net