ಲಖನೌ ತಂಡಕ್ಕೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಕಾರ್ಯತಂತ್ರ ಸಲಹೆಗಾರ

mss
Published on

ಲಖನೌ: ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಮುಂದಿನ ಐಪಿಎಲ್ ಆವೃತ್ತಿಗೆ ಲಖನೌ ಸೂಪರ್‌ಜೈಂಟ್ಸ್ ತಂಡದ ಕಾರ್ಯತಂತ್ರ ಸಲಹೆಗಾರ ಆಗಿ ನೇಮಕಗೊಂಡಿದ್ದಾರೆ ಎಂದು ಗುರುವಾರ ್ರಾಂಚೈಸಿ ತಿಳಿಸಿದೆ.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಿರುವ ಅಪಾರ ಅನುಭವ ಹೊಂದಿರುವ ಎಂಎಸ್‌ಕೆ ಮಾರ್ಗದರ್ಶನ ಲಖನೌ ತಂಡಕ್ಕೆ ಹೊಸ ಆಯಾಮ ನೀಡಲಿದೆ ಎಂದು ್ರಾಂಚೈಸಿ ತಿಳಿಸಿದೆ. 2016ರಿಂದ 2020ರವರೆಗೆ ಟೀಮ್ ಇಂಡಿಯಾ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಅವರು, ಆಂಧ್ರ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾಗಿ 13 ಜಿಲ್ಲೆಗಳಲ್ಲಿ ಕ್ರಿಕೆಟ್ ಬೆಳವಣಿಗೆಯ ಜತೆಗೆ ತರಬೇತಿ ಸೌಲಭ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 48 ವರ್ಷದ ಎಂಎಸ್‌ಕೆ, ಭಾರತದ ಪರ ಆರು ಟೆಸ್ಟ್, 17 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 106 ಮತ್ತು 131 ರನ್ ಕಲೆಹಾಕಿದ್ದಾರೆ.

ಲ್ಯಾಂಗರ್ ನೂತನ ಕೋಚ್

ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡದ ನೂತನ ಮುಖ್ಯಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಜಸ್ಟಿನ್ ಲ್ಯಾಂಗರ್ ಜುಲೈನಲ್ಲಿ ನೇಮಕವಾಗಿದ್ದರು.

ಜಿಂಬಾಬ್ವೆಯ ಆಂಡಿ ್ಲವರ್ ಜತೆಗಿನ ಎರಡು ವರ್ಷಗಳ ಅವಧಿಯ ಒಪ್ಪಂದ ಮುಕ್ತಾಯದ ಬಳಿಕ ಲಖನೌ ತಂಡದ ಮೆಂಟರ್ ಗೌತಮ್ ಗಂಭೀರ್ ಅವರ ಸಲಹೆ ಮೇರೆಗೆ ್ರಾಂಚೈಸಿ ಲ್ಯಾಂಗರ್ ಅವರನ್ನು ಮುಖ್ಯಕೋಚ್ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಲ್ಯಾಂಗರ್ ಮಾರ್ಗದರ್ಶನದಲ್ಲಿ ಆಸೀಸ್ ತಂಡ 2021ರಲ್ಲಿ ಟಿ20 ಚಾಂಪಿಯನ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net