ಎಂಟರ ಘಟ್ಟಕ್ಕೇರಿದ ಪೋರ್ಚುಗಲ್: ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಲೊವೇನಿಯಾ ಔಟ್

New-Project-2
Published on

ಫ್ರಾಂಕ್​ಫಟ್​ (ಜರ್ಮನಿ): ವಿಶ್ವ ುಟ್‌ಬಾಲ್ ಲೋಕದ ಸೂಪರ್ ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ಪಂದ್ಯದ ಹೆಚ್ಚುವರಿ ಸಮಯದ ಪೆನಾಲ್ಟಿ ಕಿಕ್‌ನಲ್ಲಿ ಗೋಲು ದಾಖಲಿಸಲು ವೈಲ್ಯ ಅನುಭವಿಸಿದ ನಡುವೆಯೂ ಗೋಲು ಕೀಪರ್ ಡಿಯೊಗಾ ಕೋಸ್ಟಾ ಸಾಹಸದ ನೆರವಿನಿಂದ ಪೋರ್ಚುಗಲ್ ತಂಡ ಪ್ರತಿಷ್ಠಿತ ಯುರೋ ಕಪ್ ಟೂರ್ನಿ ಕ್ವಾರ್ಟರ್‌ೈನಲ್‌ಗೆ ದಾಪುಗಾಲಿಟ್ಟಿತು. ಸೋಮವಾರ ನಡೆದ ಪಂದ್ಯದಲ್ಲಿ ಪೋರ್ಚುಗಲ್ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 3-0 ಗೋಲುಗಳ ಅಂತರದಿಂದ ಸ್ಲೊವೇನಿಯಾ ವಿರುದ್ಧ ಗೆದ್ದು ಬೀಗಿತು. ಕ್ವಾರ್ಟಫೈನಲ್‌ನಲ್ಲಿ ಫ್ರಾನ್ಸ್ ಎದುರು ಹೋರಾಡಲಿದೆ.

ವಿಶ್ವ ರ‌್ಯಾಂಕಿಂಗ್‌ನಲ್ಲಿ 57ನೇ ಸ್ಥಾನದಲ್ಲಿರುವ ಸ್ಲೊವೇನಿಯಾ ಹಾಗೂ ಪೋರ್ಚುಗಲ್ ನಡುವಿನ ಪಂದ್ಯದ ನಿಗದಿತ 90 ನಿಮಿಷ ಗೋಲು ರಹಿತವಾಗಿ ಉಳಿಯಿತು. ಹೆಚ್ಚುವರಿ ಸಮಯವು 0-0 ರಿಂದ ಮುಕ್ತಾಯಗೊಂಡಿತು. ಇದರಿಂದಾಗಿ ಪಂದ್ಯದ ವಿಜೇತರ ನಿರ್ಣಯಿಸಿದ ಪೆನಾಲ್ಟಿ ಶೂಟಾಟ್‌ನಲ್ಲಿ ಪೋರ್ಚುಗಲ್ ಪರ ಮೊದಲ ಪೆನಾಲ್ಟಿ ಪಡೆದ ಕ್ರಿಶ್ಚಿಯಾನೊ ರೊನಾಲ್ಡೊ ಗೋಲು ಕೀಪರ್ ವಂಚಿಸುವಲ್ಲಿ ಯಶಸ್ವಿಯಾದರು. ನಂತರದ ಎರಡು ಶೂಟೌಟ್‌ನಲ್ಲಿ ಬ್ರುನೋ ೆರ್ನಾಂಡೀಸ್, ಬರ್ನಾಡೋ ಸಿಲ್ವ ಪೋರ್ಚುಗೀಸ್‌ರ ಗೆಲುವು ಖಾತ್ರಿಪಡಿಸಿದರು. ಆದರೆ ಸ್ಲೊವೇನಿಯಾದ ಜೋಸ್ಿ ಇಸಿಲಿಕ್, ಜೂರ್ ಬಾಲ್ಕೊವೆಕ್ ಹಾಗೂ ಬೆಂಜಮಿನ್ ವರ್ಬಿಕ್‌ಗೆ ತಡೆಗೋಡೆಯಂತೆ ನಿಂತ ಡಿಯೊಗಾ ಕೋಸ್ಟಾ ಪೋರ್ಚುಗಲ್ ಗೆಲುವಿನ ರೂವಾರಿ ಎನಿಸಿದರು.

ಕೊನೇ ಯುರೋಕಪ್ ಎಂದ ರೊನಾಲ್ಡೊ: ಹಾಲಿ ಟೂರ್ನಿ ತನ್ನ ವೃತ್ತಿಜೀವನದ ಕೊನೆಯ ಯುರೋ ಕಪ್ ಟೂರ್ನಿ ಆಗಿದೆ ಕ್ರಿಶ್ಚಿಯಾನೊ ರೊನಾಲ್ಡೊ ಖಾತ್ರಿಪಡಿಸಿದ್ದಾರೆ. ಸ್ಲೊವೇನಿಯಾ ವಿರುದ್ಧ ಗೆಲುವಿನ ಬಳಿಕ ಮಾತನಾಡಿದ ರೊನಾಲ್ಡೊ, ನಿಸ್ಸಂದೇಹವಾಗಿ, ಇದು ನನ್ನ ಕೊನೆಯ ಯುರೋಪಿಯನ್ ಚಾಂಪಿಯನ್‌ಷಿಪ್ ಆಗಿದೆ. ಆದರೆ ಇದರ ಬಗ್ಗೆ ಹೆಚ್ಚು ಭಾವನಾತ್ಮಕವಾಗಿಲ್ಲ ಎಂದಿದ್ದಾರೆ. ಯುರೋ ಕಪ್‌ನಲ್ಲಿ ಗರಿಷ್ಠ ಗೋಲು ದಾಖಲಿಸಿರುವ ರೊನಾಲ್ಡೊ ಹಾಲಿ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ಇದುವರೆಗೆ ಒಂದೂ ಗೋಲು ದಾಖಲಿಸಿಲ್ಲ. ಪಂದ್ಯದ ಹೆಚ್ಚುವರಿ ಸಮಯದಲ್ಲಿ ಸಿಕ್ಕ ಪೆನಾಲ್ಟಿಯಲ್ಲಿ ಗೋಲು ಸಿಡಿಸಲು ವಿಲರಾದ ಬಳಿಕ 39 ವರ್ಷದ ರೊನಾಲ್ಡೊ ಅಂಗಣದಲ್ಲಿ ಭಾವುಕರಾದರು. ಆದರೆ ಸಹ ಆಟಗಾರರು ಅವರ ಹಣೆಗೆ ಚುಂಬಿಸಿ ಆತ್ಮಸ್ಥೈರ್ಯ ತುಂಬಿದರು. ಬಳಿಕ ಪೆನಾಲ್ಟಿ ಶೂಟೌನಲ್ಲಿ ಗೋಲು ದಾಖಲಿಸಿದ ರೊನಾಲ್ಡೊ, ಅಭಿಮಾನಿಗಳಿ ಕೈ ಮುಗಿಯುವ ಮೂಲಕ ಕ್ಷಮೆಯಾಚನೆ ಜತೆಗೆ ಕೋಪ, ಹತಾಶೆಯನ್ನು ಹೊರಹಾಕಿದರು.

1. ಡಿಯೊಗಾ ಕೋಸ್ಟಾ ಯುರೋ ಕಪ್‌ನ ಶೂಟೌಟ್‌ನಲ್ಲಿ ಮೂರು ಪೆನಾಲ್ಟಿಗಳನ್ನು ತಡೆದ ಮೊದಲ ಗೋಲು ಕೀಪರ್ ಎನಿಸಿದರು.

7. ಪೋರ್ಚುಗಲ್ ತಂಡ ಯುರೋ ಕಪ್‌ನಲ್ಲಿ 7ನೇ ಬಾರಿ ಕ್ವಾರ್ಟರ್‌ೈನಲ್‌ಗೇರಿದ ಸಾಧನೆ ಮಾಡಿತು. ್ರಾನ್ಸ್ (6) ನಂತರದ ಸ್ಥಾನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net