ಕೆಕೆಆರ್​ ತಂಡದಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ದಿನೇಶ್ ಕಾರ್ತೀಕ್ ನಾಯಕನಲ್ಲ !

Dinesh Kartik
Published on

ಇಂದು ಸಂಜೆ ಮುಂಬೈ ಇಂಡಿಯನ್ಸ್​ ಮತ್ತು ಕೋಲ್ಕತ್ತ ನೈಟ್​ ರೈಡರ್ಸ್​ ನಡುವೆ ಪಂದ್ಯ ನಡೆಯಲಿದ್ದು, ಕೆಕೆಆರ್​ ತಂಡದಲ್ಲಿ ಚಿಕ್ಕ ಬದಲಾವಣೆ ಆಗಿದೆ.

ಕೆಕೆಆರ್​ ತಂಡವನ್ನು ಇಷ್ಟು ದಿನ ಮುನ್ನಡೆಸಿದ್ದ ನಾಯಕ ದಿನೇಶ್​ ಕಾರ್ತೀಕ್​ ತಮ್ಮ ಸ್ಥಾನವನ್ನು ಇಂಗ್ಲೆಂಡ್​ನ ಇಯಾನ್ ಮೋರ್ಗಾನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ದಿನೇಶ್​ ಕಾರ್ತೀಕ್​ ಅವರು ಪ್ರಸ್ತುತ ಐಪಿಎಲ್​ ಸರಣಿಯಲ್ಲಿ ಬ್ಯಾಟಿಂಗ್​ನಲ್ಲಿ ವಿಫಲರಾಗುತ್ತಿರುವ ಕಾರಣ, ತಮ್ಮ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ.

ಇದುವರೆಗೆ ಆಡಿದ ಒಟ್ಟು ಏಳು ಪಂದ್ಯಗಳಲ್ಲಿ ದಿನೇಶ್ ಕಾರ್ತೀಕ್​ ಗಳಿಸಿದ್ದು ಕೇವಲ 108 ರನ್​ಗಳನ್ನು ಮಾತ್ರ. ಒಂದೇ ಒಂದು ಅರ್ಧ ಶತಕ ಬಾರಿಸಿದ್ದಾರೆ. ನಾನು ಬ್ಯಾಟಿಂಗ್​ ಮೇಲೆ ಹೆಚ್ಚಿನ ಗಮನ ಹರಿಸಲು ಇಚ್ಛಿಸುತ್ತೇನೆ. ಅಧಿಕ ರನ್​ ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಲು ಬಯಸುತ್ತಿದ್ದೇನೆ. ಹಾಗಾಗಿ ನಾಯಕತ್ವವನ್ನು ಇಯಾನ್ ಮೋರ್ಗಾನ್ ಗೆ ಬಿಟ್ಟುಕೊಡುತ್ತಿರುವುದಾಗಿ ಕೆಕೆಆರ್ ಮ್ಯಾನೇಜ್​ಮೆಂಟ್​ಗೆ ದಿನೇಶ್ ಕಾರ್ತೀಕ್​ ತಿಳಿಸಿದ್ದಾರೆ.

ದಿನೇಶ್ ಕಾರ್ತೀಕ್​ ಅವರು 2018ರಲ್ಲಿ ಕೆಕೆಆರ್ ನಾಯಕರಾಗಿ ನೇಮಕವಾಗಿದ್ದರು. ಗೌತಮ್​ ಗಂಭೀರ್ ಅವರ ನಂತರ ಆ ಸ್ಥಾನಕ್ಕೆ ಬಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net