

ಮುಂಬೈ: ಹಾಲಿ ಐಪಿಎಲ್ ಆವೃತ್ತಿಯ ಪ್ಲೇಆ್ ಪಂದ್ಯಗಳಿಗೆ ಇಂಗ್ಲೆಂಡ್ ಆಟಗಾರರು ಅಲಭ್ಯರಾಗಲಿದ್ದು ತವರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ಗೆ ಮುನ್ನ ಪಾಕಿಸ್ತಾನ ವಿರುದ್ಧ ಪೂರ್ವಸಿದ್ಧತಾ ಸರಣಿ ಆಡಲಿದ್ದು, ಅದಕ್ಕೂ ಮುನ್ನ ಎಲ್ಲ ಆಟಗಾರರು ಭಾರತದಿಂದ ಇಂಗ್ಲೆಂಡ್‌ಗೆ ಮರಳಲಿದ್ದಾರೆ.
ಸಿಎಸ್‌ಕೆ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ದೊಡ್ಡ ಹಿನ್ನಡೆ ಎದುರಾಗಿದ್ದು, ಕೊನೇ ಲೀಗ್ ಪಂದ್ಯಕ್ಕೆ ವಿಲ್ ಜಾಕ್ಸ್ ಹಾಗೂ ರೀಸ್ ಟಾಪ್ಲೆ ಅವರ ಸೇವೆಯನ್ನು ಆರ್‌ಸಿಬಿ ತಂಡ ಕಳೆದುಕೊಳ್ಳಲಿದೆ. ಈಗಾಗಲೆ ತವರಿನತ್ತ ಪ್ರಯಾಣ ಬೆಳೆಸಿರುವ ಇವರಿಬ್ಬರಿಗೆ ರಾಜಸ್ಥಾನ ತಂಡದ ಜೋಸ್ ಬಟ್ಲರ್, ಪಂಜಾಬ್ ಕಿಂಗ್ಸ್‌ನ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಜತೆಯಾಗಿದ್ದು, ಇಂಗ್ಲೆಂಡ್ ಆಟಗಾರರ ಅನುಪಸ್ಥಿತಿಯನ್ನು ್ರಾಂಚೈಸಿಗಳು ಸೋಮವಾರ ಖಾತ್ರಿಪಡಿಸಿವೆ. ಪ್ಲೇಆ್ ರೇಸ್‌ನಿಂದ ಹೊರಬಿದ್ದಿರುವ ಪಂಜಾಬ್ ಕಿಂಗ್ಸ್‌ನ ಕೊನೇ 2 ಲೀಗ್ ಪಂದ್ಯಕ್ಕೆ ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಲಿವಿಂಗ್‌ಸ್ಟೋನ್, ಮುಂಬರುವ ಟಿ20 ವಿಶ್ವಕಪ್ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದು, ಐಸಿಸಿ ಟೂರ್ನಿಗೆ ಸಂಪೂರ್ಣ ಫಿಟ್ ಆಗಲು ವಿಶ್ರಾಂತಿಗಾಗಿ ತಾಯ್ನಡಿಗೆ ಮರಳಿದ್ದಾರೆ. ಉಳಿದಂತೆ ಫಿಲ್ ಸಾಲ್ಟ್ (ಕೆಕೆಆರ್), ಸ್ಯಾಮ್ ಕರ‌್ರನ್, ಜಾನಿ ಬೇರ್‌ಸ್ಟೋ (ಪಂಜಾಬ್), ಮೊಯಿನ್ ಅಲಿ (ಸಿಎಸ್‌ಕೆ) ಸಹ ಅಂತಿಮ ಲೀಗ್ ಪಂದ್ಯಗಳಿಗೆ ಗೈರಾಗಲಿದ್ದಾರೆ.