

ಬ್ರಿಗ್ಟನ್: ಇಂಗ್ಲೆಂಡ್ ವೇಗಿ ಒಲಿ ರಾಬಿನ್ಸನ್ ಕೌಂಟಿ ಚಾಂಪಿಯನ್ಷಿಪ್ ಪಂದ್ಯದ ಓವರ್ ಒಂದರಲ್ಲಿ 43 ರನ್ ಬಿಟ್ಟುಕೊಟ್ಟಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದ 2ನೇ ಅತ್ಯಂತ ದುಬಾರಿ ಓವರ್ ಎನಿಸಿದೆ.
ಸಸೆಕ್ಸ್ ಪರ 2ನೇ ಇನಿಂಗ್ಸ್ನ 59ನೇ ಓವರ್ನಲ್ಲಿ ರಾಬಿನ್ಸನ್ (6, 4+2ನೋಬಾಲ್, 4, 6, 4, 4+2ನೋಬಾಲ್, 4, 4+2ನೋಬಾಲ್, 1) 2 ಸಿಕ್ಸರ್, 4 ಬೌಂಡರಿ ಮತ್ತು 1 ಸಿಂಗಲ್ಸ್ ಬಿಟ್ಟುಕೊಟ್ಟರು. ಜತೆಗೆ 3 ನೋಬಾಲ್ ಎಸೆದರು. ಕೌಂಟಿ ಕ್ರಿಕೆಟ್ನಲ್ಲಿ ನೋಬಾಲ್ಗೆ 2 ರನ್ ನೀಡಲಾಗುತ್ತದೆ. ಬ್ಯಾಟ್ನಿಂದ ಬಂದ 37 ರನ್ಗಳನ್ನು ಲೈಸೆಸ್ಟರ್ಶೈರ್ನ ಲೂಯಿಸ್ ಕಿಂಬರ್ ಸಿಡಿಸಿದರು.
1989-90ರಲ್ಲಿ ನ್ಯೂಜಿಲೆಂಡ್ನ ಬೆರ್ಟ್ ವೇನ್ಸ್ 17 ನೋಬಾಲ್ ಸಹಿತ 77 ರನ್ ಬಿಟ್ಟುಕೊಟ್ಟಿದ್ದು ಪ್ರಥಮ ದರ್ಜೆ ಕ್ರಿಕೆಟ್ನ ದುಬಾರಿ ಓವರ್ ಆಗಿದೆ.