

IND vs ENG Test: ಪ್ರಸಕ್ತ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಇಂದು ಐದನೇ ಹಾಗೂ ಕೊನೆ ದಿನದಂದು ಭಾರತ ನೀಡಿದ್ದ 371 ರನ್ ಗುರಿಯನ್ನು ಬೆನ್ನತ್ತಿದ ಆಂಗ್ಲರ ಪಡೆಗೆ ಬೆನ್ ಡಕೆಟ್ ಸಿಡಿಸಿದ ಭರ್ಜರಿ ಶತಕ ಗೆಲುವಿನ ಹಾದಿ ತೋರಿಸಿತು.
ಇಂಗ್ಲೆಂಡ್ಗೆ ಬೆನ್ ಡಕೆಟ್ ಶತಕ, ಜ್ಯಾಕ್ ಕ್ರಾಲಿ ಮತ್ತು ಜೋ ರೂಟ್ ಅರ್ಧ ಶತಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಿತು. ಕಡೆಯವರೆಗೂ ಕ್ರೀಸ್ಗೆ ಅಂಟಿ ನಿಂತ ರೂಟ್, ಜೇಮಿ ಸ್ಮಿತ್ ಜೊತೆಗೆ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಬ್ಯಾಟರ್ಗಳ ವಿಕೆಟ್ ಕಬಳಿಸಲು ತೀರ ಪರದಾಡಿದ ಟೀಮ್ ಇಂಡಿಯಾ ಬೌಲರ್ಗಳು, ಬೌಲಿಂಗ್ನಲ್ಲಿ ಕಮಾಲ್ ಮಾಡಲು ವಿಫಲರಾದರು.
ಅಂತಿಮವಾಗಿ ಐದು ವಿಕೆಟ್ಗಳಿಂದ ಇಂಗ್ಲೆಂಡ್ ಜಯ ಸಾಧಿಸಿದರೆ, ಅತ್ತ ಗಿಲ್ ಪಡೆ ಮೊದಲ ಟೆಸ್ಟ್ನಲ್ಲೇ ಭಾರೀ ಮುಖಭಂಗ ಅನುಭವಿಸಿದೆ. ಇದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.