

ಮ್ಯಾಂಚೆಸ್ಟರ್: ಪಾಕಿಸ್ತಾನ ಬೌಲರ್‌ಗಳ ಮಾರಕ ದಾಳಿ ನಡುವೆಯೂ ಕ್ರಿಸ್ ವೋಕ್ಸ್ (84*ರನ್, 120 ಎಸೆತ, 10 ಬೌಂಡರಿ) ಹಾಗೂ ಜೋಸ್ ಬಟ್ಲರ್ (75ರನ್, 101 ಎಸೆತ, 7 ಬೌಂಡರಿ, 1 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ ಜಯ ದಾಖಲಿಸಿತು. ಓಲ್ಡ್ ಟಾ್ರೆೆರ್ಡ್ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ನೀಡಿದ 277 ರನ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡ 82.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತು.
ಮೊಹಮದ್ ಅಬ್ಬಾಸ್ ಮಾರಕ ದಾಳಿಯಿಂದಾಗಿ ಆರಂಭದಲ್ಲೇ ರೋರಿ ಬರ್ನ್ಸ್ (10) ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಆಘಾತ ಕಂಡಿತು. ಬಳಿಕ ಡೊಮಿನಿಕ್ ಸಿಬ್ಲೆ (36ರನ್, 114 ಎಸೆತ, 4 ಬೌಂಡರಿ) ಹಾಗೂ ನಾಯಕ ಜೋ ರೂಟ್ (42 ರನ್, 84 ಎಸೆತ, 7 ಬೌಂಡರಿ) ಜೋಡಿ 2ನೇ ವಿಕೆಟ್ 64 ರನ್ ಪೇರಿಸಿ ತಂಡಕ್ಕೆ ಚೇತರಿಕೆ ನೀಡಿತು. ಈ ಜೋಡಿ ಬೇರ್ಪಡಿಸಿದ ಯಾಸಿರ್ ಷಾ ಇಂಗ್ಲೆಂಡ್‌ಗೆ ಶಾಕ್ ನೀಡಿದರು. ಇದರ ಬೆನ್ನಲ್ಲೇ ರೂಟ್, ಬೆನ್ ಸ್ಟೋಕ್ಸ್ (9) ಹಾಗೂ ಓಲಿ ಪೋಪ್ (7) ನಿರಾಸೆ ಅನುಭವಿಸಿದರು. 117 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸಂಕಷ್ಟದ ಸುಳಿಗೆ ಸಿಲುಕಿತು. ಈ ವೇಳೆಯಾದ ವೋಕ್ಸ್ ಹಾಗೂ ಬಟ್ಲರ್ ಜೋಡಿ 6ನೇ ವಿಕೆಟ್‌ಗೆ ಉಪಯುಕ್ತ 139 ರನ್ ಪೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಈ ವೇಳೆ ಯಾಸಿರ್ ಷಾ (99ಕ್ಕೆ 4) ಆಘಾತ ನೀಡಿದರೂ ಕ್ರಿಸ್ ವೋಕ್ಸ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮೊದಲು 8 ವಿಕೆಟ್‌ಗೆ 137 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಪಾಕಿಸ್ತಾನ ತಂಡ, 2ನೇ ಇನಿಂಗ್ಸ್‌ನಲ್ಲಿ 46.4 ಓವರ್‌ಗಳಲ್ಲಿ 169 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕಿಸ್ತಾನ ಮೊದಲ ಇನಿಂಗ್ಸ್ 326 ರನ್ ಗಳಿಸಿದರೆ, ಇಂಗ್ಲೆಂಡ್ 219 ರನ್‌ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಪಾಕಿಸ್ತಾನ ತಂಡ 107 ರನ್ ಮುನ್ನಡೆ ಸಾಧಿಸಿತ್ತು.
ಪಾಕಿಸ್ತಾನ: 326 ಮತ್ತು 46.4 ಓವರ್‌ಗಳಲ್ಲಿ 169 (ಯಾಸೀರ್ ಷಾ 33, ಸ್ಟುವರ್ಟ್ ಬ್ರಾಡ್ 37ಕ್ಕೆ 3, ಕ್ರಿಸ್ ವೋಕ್ಸ್ 11ಕ್ಕೆ 2, ಬೆನ್ ಸ್ಟೋಕ್ಸ್ 11ಕ್ಕೆ 2), ಇಂಗ್ಲೆಂಡ್: 219 ಮತ್ತು 82.1 ಓವರ್‌ಗಳಲ್ಲಿ 7 ವಿಕೆಟ್‌ಗೆ 277 (ಸಿಬ್ಲೆ 36, ರೂಟ್ 42, ಬಟ್ಲರ್ 75, ವೋಕ್ಸ್ 84*, ಯಾಸಿರ್ ಷಾ 99ಕ್ಕೆ 4 ಶಾಹೀನ್ ಅಫ್ರಿದಿ 61ಕ್ಕೆ 1, ಮೊಹಮದ್ ಅಬ್ಬಾಸ್ 36ಕ್ಕೆ 1, ನಸೀಮ್ ಷಾ 45ಕ್ಕೆ 1).
2ನೇ ಟೆಸ್ಟ್ ಪಂದ್ಯ: ಆ.13 ರಿಂದ
ಸ್ಥಳ: ಸೌಥಾಂಪ್ಟನ್, ಇಂಗ್ಲೆಂಡ್, ಪಾಕಿಸ್ತಾನ, ಟೆಸ್ಟ್