

ಲಂಡನ್: ಕ್ರಿಕೆಟ್‌ನ ತವರೂರು ಎಂದೇ ಕರೆಯಲ್ಪಡುವ ಇಂಗ್ಲೆಂಡ್‌ನ ಲಾರ್ಡ್ಸ್ನಲ್ಲಿ ಇದೇ ಪ್ರಥಮ ಬಾರಿಗೆ ಮಹಿಳಾ ಕ್ರಿಕೆಟಿಗರಿಗೆ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಲಾರ್ಡ್ಸ್ ಮೊದಲ ಬಾರಿಗೆ ಮಹಿಳಾ ಟೆಸ್ಟ್ ಮ್ಯಾಚ್ಗಳನ್ನು ನಡೆಸಲಿದ್ದು, ಕ್ರಿಕೆಟ್ನತ್ತ ಮಹಿಳೆಯರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇತರೆ ಫಾರ್ಮೆಟ್ನ ಟೂರ್ನಿಗಳನ್ನು ಆಯೋಜಿಸಿದ್ದ ಇಂಗ್ಲೆಂಡ್ ಕ್ರಿಕೆಟ್, ಇಲ್ಲಿಯವರೆಗೆ ಟೆಸ್ಟ್ ಪಂದ್ಯಗಳ ಬಗ್ಗೆ ಚಿಂತಿಸಿರಲಿಲ್ಲ.
ಈ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ಸಾಕ್ಷಿಯಾಗಲಿದ್ದು, ಇದು ನಾಲ್ಕು ಅಥವಾ ಐದು ದಿನಗಳ ಪಂದ್ಯವಾಗಿರಲಿದೆಯೇ ಎಂಬುದು ಸದ್ಯ ಪ್ರಶ್ನಾರ್ಥಕ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪ್ರಕಟವಾಗಬೇಕಿದೆ. ಮೇರಿಲ್ಬೋನ್ ಕ್ರಿಕೆಟ್ ಕ್ಲಬ್‌ನ ಕ್ರಿಕೆಟ್ ಸಮಿತಿಯ ಅಧ್ಯಕ್ಷೆ, ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ ಕ್ಲೇರ್ ಟೇಲರ್ ಮಾತನಾಡಿ, "ದೇಶವನ್ನು ಪ್ರತಿನಿಧಿಸುವ ಉತ್ಸಾಹದಲ್ಲಿ ಕ್ರಿಕೆಟ್ ಆಡುವ ಯುವತಿಯರು ಈಗ ಕ್ರಿಕೆಟ್‌ನ ತವರು ಎಂದೇ ಕರೆಸಿಕೊಳ್ಳುವ ಲಂಡನ್ನಲ್ಲಿ ಟೆಸ್ಟ್ ಪಂದ್ಯವಾಡಲು ಎದುರುನೋಡುತ್ತಿದ್ದಾರೆ. ಕ್ರಿಕೆಟ್ ಎಲ್ಲರಿಗೂ ಒಂದು ಆಟ ಎಂಬುದಕ್ಕೆ ಇದೇ ಒಂದೊಳ್ಳೆ ನಿದರ್ಶನ" ಎಂದರು.
ಇನ್ನು ಈ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ರಿಚರ್ಡ್ ಗೌಲ್ಡ್ ಪ್ರತಿಕ್ರಿಯಿಸಿ, "ಇದು ನಿಜವಾಗಿಯೂ ವಿಶೇಷ ಸಂದರ್ಭ. ಕ್ರಿಕೆಟ್ನಂತಹ ಆಟಕ್ಕೆ ನಿಜವಾದ ಅರ್ಥ ತಂದುಕೊಡುತ್ತದೆ" ಎಂದು ಸಂತಸ ವ್ಯಕ್ತಪಡಿಸಿದರು,(ಏಜೆನ್ಸೀಸ್).