ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ವೈಟ್​ಬಾಲ್​​ ತಂಡ ಪ್ರಕಟ; ಏಕದಿನ ತಂಡದಲ್ಲಿ ರೂಟ್​ಗೆ ಸ್ಥಾನ, ಸ್ಟೋಕ್ಸ್​ ಗೈರು

web root
Published on

ಲಂಡನ್​: ಮುಂದಿನ ವರ್ಷದ ಭಾರತ ಪ್ರವಾಸ ಮತ್ತು ಚಾಂಪಿಯನ್ಸ್​ ಟ್ರೋಫಿಗೆ ಇಂಗ್ಲೆಂಡ್​ ತಂಡ ಪ್ರಕಟಗೊಂಡಿದೆ. ಭಾರತ ಪ್ರವಾಸದ ಏಕದಿನ ಸರಣಿಯಲ್ಲಿ ಆಡಲಿರುವ ತಂಡವೇ ಚಾಂಪಿಯನ್ಸ್​ ಟ್ರೋಫಿಯಲ್ಲೂ ಕಣಕ್ಕಿಳಿಯಲಿದೆ. ಅನುಭವಿ ಬ್ಯಾಟರ್​ ಜೋ ರೂಟ್​ ಸುಮಾರು ಒಂದು ವರ್ಷದ ಬಳಿಕ ಏಕದಿನ ತಂಡಕ್ಕೆ ಮರಳಿದ್ದರೆ, ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ಸ್ಥಾನ ಪಡೆದಿಲ್ಲ.

33 ವರ್ಷದ ರೂಟ್​ 2023ರ ಏಕದಿನ ವಿಶ್ವಕಪ್​ನಲ್ಲಿ ಕೊನೆಯದಾಗಿ ಆಡಿದ್ದರೆ, ಟೆಸ್ಟ್​ ತಂಡದ ನಾಯಕರಾಗಿರುವ ಸ್ಟೋಕ್ಸ್​ ಗಾಯದಿಂದ ಬಳಲುತ್ತಿರುವ ಕಾರಣ ಆಯ್ಕೆಗೆ ಪರಿಗಣಿಸಲಾಗಿಲ್ಲ. ಜನವರಿ 22ರಿಂದ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯೊಂದಿಗೆ ಇಂಗ್ಲೆಂಡ್​ ತಂಡ ಭಾರತ ಪ್ರವಾಸವನ್ನು ಆರಂಭಿಸಲಿದೆ. ಜೋಸ್​ ಬಟ್ಲರ್​ ಏಕದಿನ ಮತ್ತು ಟಿ20 ತಂಡಗಳಿಗೆ ನಾಯಕರಾಗಿ ಮುಂದುವರಿಯಲಿದ್ದಾರೆ.

ಏಕದಿನ ತಂಡ: ಜೋಸ್​ ಬಟ್ಲರ್​ (ನಾಯಕ), ಜೋಫ್ರಾ ಆರ್ಚರ್​, ಗಸ್​ ಅಟ್ಕಿನ್​ಸನ್​, ಜೇಕಬ್​ ಬೆಥೆಲ್​, ಹ್ಯಾರಿ ಬ್ರೂಕ್​, ಬೆಡನ್​ ಕರ್ಸ್​, ಬೆನ್​ ಡಕೆಟ್​, ಜೇಮಿ ಓವರ್ಟನ್​, ಜೇಮಿ ಸ್ಮಿತ್​, ಲಿವಿಂಗ್​ಸ್ಟೋನ್​, ಆದಿಲ್​ ರಶೀದ್​, ಜೋ ರೂಟ್​, ಸಕಿಬ್​ ಮಹಮೂದ್​, ಫಿಲ್​ ಸಾಲ್ಟ್​, ಮಾರ್ಕ್​ ವುಡ್​.

ಟಿ20 ತಂಡ: ಜೋಸ್​ ಬಟ್ಲರ್​ (ನಾಯಕ), ರೆಹನ್​ ಅಹ್ಮದ್​, ಜೋಫ್ರಾ ಆರ್ಚರ್​, ಗಸ್​ ಅಟ್ಕಿನ್​ಸನ್​, ಜೇಕಬ್​ ಬೆಥೆಲ್​, ಹ್ಯಾರಿ ಬ್ರೂಕ್​, ಬೆಡನ್​ ಕರ್ಸ್​, ಬೆನ್​ ಡಕೆಟ್​, ಜೇಮಿ ಓವರ್ಟನ್​, ಜೇಮಿ ಸ್ಮಿತ್​, ಲಿವಿಂಗ್​ಸ್ಟೋನ್​, ಆದಿಲ್​ ರಶೀದ್​, ಸಕಿಬ್​ ಮಹಮೂದ್​, ಫಿಲ್​ ಸಾಲ್ಟ್​, ಮಾರ್ಕ್​ ವುಡ್​.

ಭಾರತ ಪ್ರವಾಸದ ವೇಳಾಪಟ್ಟಿ: ಜ.22: ಮೊದಲ ಟಿ20, ಕೋಲ್ಕತ; ಜ.25: 2ನೇ ಟಿ20, ಚೆನ್ನೈ; ಜ.28: 3ನೇ ಟಿ20, ರಾಜ್​ಕೋಟ್​; ಜ.31: 4ನೇ ಟಿ20, ಪುಣೆ; ಫೆ. 2: 5ನೇ ಟಿ20, ಮುಂಬೈ; ಫೆ.6: ಮೊದಲ ಏಕದಿನ, ನಾಗ್ಪುರ, ಫೆ. 9: 2ನೇ ಏಕದಿನ, ಕಟಕ್​; ಫೆ. 12: 3ನೇ ಏಕದಿನ, ಅಹಮದಾಬಾದ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net