2ನೇ ಇನಿಂಗ್ಸ್‌ನಲ್ಲಿ ಕುಸಿದ ಇಂಗ್ಲೆಂಡ್, ಜಯದತ್ತ ನ್ಯೂಜಿಲೆಂಡ್

eng vs nz web
Published on

ಬರ್ಮಿಂಗ್‌ಹ್ಯಾಂ: ನ್ಯೂಜಿಲೆಂಡ್ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ 2ನೇ ಇನಿಂಗ್ಸ್‌ಗೆ ಕಡಿವಾಣ ಹಾಕುವ ಮೂಲಕ ಗೆಲುವಿನತ್ತ ಮುನ್ನಡೆದಿದೆ.

ಶನಿವಾರ 3 ವಿಕೆಟ್‌ಗೆ 229 ರನ್‌ಗಳಿಂದ 3ನೇ ದಿನದಾಟ ಮುಂದುವರಿಸಿದ ಕಿವೀಸ್, ರಾಸ್ ಟೇಲರ್ (80) ಸಾಹಸದಿಂದ 388 ರನ್ ಗಳಿಸಿ ಆಲೌಟ್ ಆಯಿತು. ನಂತರ 85 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ವೇಗಿಗಳಾದ ಮ್ಯಾಟ್ ಹೆನ್ರಿ (36ಕ್ಕೆ 3) ಮತ್ತು ನೀಲ್ ವ್ಯಾಗ್ನರ್ (18ಕ್ಕೆ 2) ದಾಳಿಗೆ ಕುಸಿದು ದಿನದಂತ್ಯಕ್ಕೆ 9 ವಿಕೆಟ್‌ಗೆ 122 ರನ್ ಗಳಿಸಿ ಸಂಕಷ್ಟದಲ್ಲಿದೆ. ಒಲಿ ಸ್ಟೋನ್​ (15*) ಜತೆಗೆ ಕೊನೇ ಬ್ಯಾಟ್ಸ್​ಮನ್​ ಜೇಮ್ಸ್ ಆಂಡರ್​ಸನ್​ (0*) ಕ್ರೀಸ್‌ನಲ್ಲಿದ್ದು, ಇಂಗ್ಲೆಂಡ್ ಕೇವಲ 37 ರನ್ ಮುನ್ನಡೆಯಲ್ಲಿದೆ.

ಈ ಮುನ್ನ ಡೆವೋನ್ ಕಾನ್‌ವೇ (80) ಮತ್ತು ವಿಲ್ ಯಂಗ್ (82) ಬಳಿಕ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಕೂಡ ಕಿವೀಸ್ ಪರ ಶತಕ ವೀರರೆನಿಸಲು ವಿಲರಾದರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಟಾಮ್ ಬ್ಲಂಡೆಲ್ (34) ಮುನ್ನಡೆಯನ್ನು ವಿಸ್ತರಿಸಿದರು.

ಇಂಗ್ಲೆಂಡ್: 303 ಮತ್ತು 41 ಓವರ್‌ಗಳಲ್ಲಿ 9 ವಿಕೆಟ್‌ಗೆ 122 (ಸಿಬ್ಲೆ 8, ಕ್ರೌಲಿ 17, ರೂಟ್ 11, ಪೋಪ್ 23, ವುಡ್​ 29, ಹೆನ್ರಿ 36ಕ್ಕೆ 3, ನೀಲ್ ವ್ಯಾಗ್ನರ್ 18ಕ್ಕೆ 3, ಅಜಾಜ್​ ಪಟೇಲ್​ 25ಕ್ಕೆ 2). ನ್ಯೂಜಿಲೆಂಡ್: 119.1 ಓವರ್‌ಗಳಲ್ಲಿ 388 (ಟೇಲರ್ 80, ನಿಕೋಲ್ಸ್ 21, ಬ್ಲಂಡೆಲ್ 34, ಬ್ರಾಡ್ 48ಕ್ಕೆ 4, ವುಡ್ 85ಕ್ಕೆ 2, ಸ್ಟೋನ್ 92ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net