

ತರೌಬ: ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿಯೆ ನಿರ್ಗಮನ ಕಂಡಿರುವ ನ್ಯೂಜಿಲೆಂಡ್ ತಂಡ ಸಿ ಗುಂಪಿನ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಉಗಾಂಡ ವಿರುದ್ಧ ಕಣಕ್ಕಿಳಿಯಲಿದ್ದು, ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಸಿ ಗುಂಪಿನಿಂದ ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ಆ್ಘಾನಿಸ್ತಾನ ಆಡಿರುವ 3 ಪಂದ್ಯಗಳಲ್ಲಿ ತಲಾ 6 ಅಂಕ ಸಂಪಾದಿಸಿ ಮೊದಲೆರಡು ಸ್ಥಾನ ಖಾತ್ರಿಪಡಿಸಿಕೊಂಡಿವೆ. ಕಿವೀಸ್ ಆಡಿರುವ 2 ಪಂದ್ಯಗಳಲ್ಲಿ ಸೋತು ಖಾತೆ ತೆರೆಯುವಲ್ಲಿ ವಿಲವಾಗಿದ್ದು, ಉಳಿದಿರುವ 2 ಪಂದ್ಯ ಗೆದ್ದರೂ ಎರಡು ತಂಡಗಳನ್ನು ಹಿಂದಿಕ್ಕಲು ಸಾಧ್ಯವಿಲ್ಲ. ಆದ್ದರಿಂದ ಆ ಎರಡು ಪಂದ್ಯಗಳು ವಿಲಿಯಮ್ಸನ್ ಪಡೆಗೆ ಔಪಚಾರಿಕ ಎನಿಸಿದ್ದು, ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಹೋರಾಡಲಿದೆ.2 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಲ್ಯ ಕಂಡಿರುವ ಕಿವೀಸ್, ಉಗಾಂಡ ಎದುರು ಲಯಕ್ಕೆ ಮರಳುವ ಹಂಬಲದಲ್ಲಿದೆ.
ಆತ್ಮವಿಶ್ವಾಸದಲ್ಲಿ ಹರಿಣ ಪಡೆ: ಈಗಾಗಲೆ ಸೂಪರ್-8 ಹಂತಕ್ಕೆ ಮೊದಲ ತಂಡವಾಗಿ ಸ್ಥಾನ ಖಾತ್ರಿಪಡಿಸಿಕೊಂಡಿರುವ ದಕ್ಷಿಣ ಆಫ್ರಿಕಾ ಶನಿವಾರ ನಡೆಯಲಿರುವ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಏಡನ್ ಮಾರ್ಕ್ರಮ್ ಪಡೆ ಅಜೇಯವಾಗಿ ಮುಂದಿನ ಸುತ್ತಿಗೇರುವ ವಿಶ್ವಾಸಲ್ಲಿದ್ದು, ಅನುಭವಿ ಸಂದೀಪ್ ಲಾಮಿಚಾನೆ ಸೇರ್ಪಡೆಯಿಂದ ಬಲ ಹೆಚ್ಚಿಸಿಕೊಂಡಿರುವ ನೇಪಾಳ ಸೂಪರ್-8ಆಸೆ ಜೀವಂತವಿರಿಸುವ ತವಕದಲ್ಲಿದೆ.ಮುಂದಿನ ಸುತ್ತಿನ ಪಂದ್ಯಗಳಿಗೂ ಕ್ವಿಂಟನ್ ಡಿ ಕಾಕ್,ರೀಜಾ ಹೆಂಡ್ರಿಕ್ಸ್ ಹಾಗೂ ನಾಯಕ ಏಡನ್ ಮಾರ್ಕ್ರಮ್, ಟ್ರಿಸ್ಟಾನ್ಸ್ ಸ್ಬಬ್ಸ್ ಾರ್ಮ್‌ಗೆ ಮರಳುವ ನಿರೀಕ್ಷೆ ಇದೆ. ವೇಗಿಗಳಾದ ಅನ್ರಿಕ್ ನೋಕಿಯಾ, ಕಗಿಸೊ ರಬಾಡ, ಒಟ್ನಿಯಲ್, ಬಾರ್ಟಮನ್ ಬಲ ತುಂಬಲಿದ್ದಾರೆ.
ನೇಪಾಳ ಉಳಿದಿರುವ 2 ಪಂದ್ಯ ಜಯಿಸಿದರು ಸೂಪರ್-ಗೇರುವುದು ಅನುಮಾನ, ಅಫ್ರಿಕಾ ಎದುರು ಗೆದ್ದರೆ, ಬಾಂಗ್ಲಾದೇಶ ವಿರುದ್ಧ ಪಂದ್ಯ ನಿರ್ಣಾಯಕ ಎನಿಸಲಿದೆ. ಜತೆಗೆ ನೆದರ್ಲೆಂಡ್ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೋಲಬೇಕು.
ಇಂದು ನಮೀಬಿಯಾ ಸವಾಲು: ಪಪುವಾ ನ್ಯೂಗಿನಿ ಎದುರಿನ ಭರ್ಜರಿ ಗೆಲುವಿನ ಬಳಿಕ ಸೂಪರ್ 8 ಅವಕಾಶ ವೃದ್ಧಿಸಿಕೊಂಡಿರುವ ಇಂಗ್ಲೆಂಡ್ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಶನಿವಾರ ಸುಲಭ ಎದುರಾಳಿ ನಮೀಬಿಯಾ ಎದುರು ಕಣಕ್ಕಿಳಿಯಲಿದೆ. ಗೆಲುವಿನೊಂದಿಗೆ ಮುಂದಿನ ಹಂತಕ್ಕೆ ರೇಸ್‌ನಲ್ಲಿ ಉಳಿಯುವ ತವಕದಲ್ಲಿದೆ. ಸ್ಕಾಟ್ಲೆಂಡ್ ಎದುರಿನ ಮೊದಲ ಪಂದ್ಯ ಮಳೆಯಿಂದ ರದ್ದು, ಬಳಿಕ ಆಸೀಸ್ ವಿರುದ್ಧ ಸೋಲುಂಡ ಹಾಲಿ ಚಾಂಪಿಯನ್ನರು ಟೂರ್ನಿಯ ಮೊದಲ ಸುತ್ತಿನಲ್ಲಿ ಹೊರಬೀಳುವ ಅಪಾಯದಲ್ಲಿ ಸಿಲುಕಿದರು. ಆದರೆ ನಿರ್ಣಾಯಕ ಓಮನ್ ವಿರುದ್ಧ 101 ಎಸೆತ ಉಳಿಸಿ ಗೆಲುವು ದಾಖಲಿಸಿದ ಇಂಗ್ಲೆಂಡ್ ರನ್‌ರೇಟ್ (-1.800 ರಿಂದ + 3.081) ಭಾರಿ ಸುಧಾರಣೆ ಕಂಡಿದ್ದು, ಗುಂಪಿನ 2ನೇ ಸ್ಥಾನಕ್ಕೆ ಸ್ಕಾಟ್ಲೆಂಡ್ ಜತೆಗೆ ನೇರ ಪೈಪೋಟಿಗೆ ಇಳಿದಿದೆ. ಇಂಗ್ಲೆಂಡ್ (3 ಅಂಕ) ಗುಂಪಿನಲ್ಲಿ 3ನೇ ಸ್ಥಾನ ಪಡೆದಿದ್ದು,ಆಸ್ಟ್ರೇಲಿಯಾ (6), ಸ್ಕಾಟ್ಲೆಂಡ್ (5) ಮೊದಲೆರಡು ಸ್ಥಾನದಲ್ಲಿವೆ. ಪ್ರಸ್ತುತ ಸ್ಕಾಟ್ಲೆಂಡ್ (+ 2.164) ಗಿಂತ ಉತ್ತಮ ರನ್‌ರೇಟ್ ಹೊಂದಿರುವ ಇಂಗ್ಲೆಂಡ್ ಗುಂಪಿನ 2ನೇ ತಂಡವಾಗಿ ಪ್ರಸ್ತುತ ಸೂಪರ್-8ಗೇರುವ ೇವರಿಟ್ ಎನಿಸಿದೆ.
ಏಕೆಂದರೆ ಸ್ಕಾಟ್ಲೆಂಡ್ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಆಸೀಸ್ ಸವಾಲು ಎದುರಿಸಲಿದೆ. ನಮೀಬಿಯಾ ಎದುರು ಇಂಗ್ಲೆಂಡ್ ಗೆದ್ದರೆ ಒಟ್ಟು 5 ಅಂಕದೊಂದಿಗೆ ಸ್ಕಾಟ್ಲೆಂಡ್ ಜತೆಗೆ ಸಮಬಲ ಸಾಧಿಸಲಿದ್ದು,ಆಗ ರನ್‌ರೇಟ್ ಲೆಕ್ಕಾಚಾರ ಮಹತ್ವದ ಪಾತ್ರವಹಿಸಲಿದೆ. ಜತೆಗೆ ಸ್ಕಾಟ್ಲೆಂಡ್ ಸೋಲಬೇಕು. ಇದನ್ನು ಹೊರತುಪಡಿಸಿ ನಮಿಬೀಯಾ ಎದುರಿನ ಪಂದ್ಯ ಮಳೆಯಿಂದ ರದ್ದಾದರೆ, ಆಸೀಸ್ ವಿರುದ್ಧ ಸ್ಕಾಟ್ಲೆಂಡ್ ಗೆದ್ದರೆ ಅಥವಾ ಆ ಪಂದ್ಯವೂ ಮಳೆಯಿಂದ ರದ್ದಾದರೆ ಯಾವುದೇ ಲೆಕ್ಕಚಾರವಿಲ್ಲದೆ ಸ್ಕಾಟ್ಲೆಂಡ್ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಆಗ ಇಂಗ್ಲೆಂಡ್ ಹೊರಬೀಳಲಿದೆ.
ಇಂದಿನ ಪಂದ್ಯಗಳು
ದ.ಆಫ್ರಿಕಾ-ನೇಪಾಳ
ಗುಂಪು: ಡಿ
ಎಲ್ಲಿ: ಸೇಂಟ್ ವಿನ್ಸೆಂಟ್
ಆರಂಭ: ಬೆಳಗ್ಗೆ 5
ನ್ಯೂಜಿಲೆಂಡ್-ಉಗಾಂಡ
ಗುಂಪು: ಸಿ ಎಲ್ಲಿ ತರೌಬ
ಆರಂಭ: ಬೆಳಗ್ಗೆ 6
ಇಂಗ್ಲೆಂಡ್-ನಮೀಬಿಯಾ
ಗುಂಪು: ಬಿ
ಎಲ್ಲಿ: ನಾರ್ತ್ ಸೌಂಡ್
ಆರಂಭ: ರಾತ್ರಿ 10.30