

ಕೋಲ್ಕತ: ಗೆಲುವಿನ ಜತೆಗೆ ರನ್‌ರೇಟ್‌ನಲ್ಲೂ ಭಾರಿ ಪ್ರಗತಿ ಕಾಣಬೇಕಾದ ಭಾರಿ ಒತ್ತಡದ ನಡುವೆ ಪಾಕಿಸ್ತಾನ ತಂಡ ಹೀನಾಯ ಸೋಲಿನೊಂದಿಗೆ ಏಕದಿನ ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ತನ್ನ 9ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಎದುರು 93 ರನ್‌ಗಳಿಂದ ಸಮಾಧಾನಕರ ಗೆಲುವು ಕಂಡಿದೆ. ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಲವಾಗಿರುವ ಜೋಸ್ ಬಟ್ಲರ್ ಪಡೆ ಹ್ಯಾಟ್ರಿಕ್ ಗೆಲುವಿನೊಂದಿಗೆ ಟೂರ್ನಿಯಿಂದ ನಿರ್ಗಮಿಸಿದ್ದು, 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಖಚಿತಪಡಿಸಿಕೊಂಡಿದೆ. 2011ರ ಬಳಿಕ ಸೆಮೀಸ್‌ಗೇರುವಲ್ಲಿ ಮತ್ತೆ ವಿಲವಾಗಿರುವ ಪಾಕಿಸ್ತಾನ 5ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ.
ಈಡನ್ ಗಾರ್ಡನ್ಸ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್, ಜೋ ರೂಟ್ (60 ರನ್, 72 ಎಸೆತ, 4 ಬೌಂಡರಿ) ಹಾಗೂ ಬೆನ್ ಸ್ಟೋಕ್ಸ್ (84 ರನ್, 76 ಎಸೆತ, 11 ಬೌಂಡರಿ, 2 ಸಿಕ್ಸರ್) ಜತೆಯಾಟದ ಬಲದಿಂದ 9 ವಿಕೆಟ್‌ಗೆ 337 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಸೆಮಿೈನಲ್‌ಗೇರಲು ಈ ಗುರಿಯನ್ನು 6.2 ಓವರ್‌ಗಳಲ್ಲೇ ಬೆನ್ನಟ್ಟಬೇಕಾದ ಅಸಾಧ್ಯ ಸವಾಲು ಹೊಂದಿದ್ದ ಪಾಕ್, ಆಲ್ರೌಂಡರ್ ಡೇವಿಡ್ ವಿಲ್ಲಿ (56ಕ್ಕೆ 3) ಹಾಗೂ ಇತರ ಬೌಲರ್‌ಗಳ ಸಂಘಟಿತ ದಾಳಿಗೆ ನಲುಗಿ 43.3 ಓವರ್‌ಗಳಲ್ಲಿ 244 ರನ್‌ಗಳಿಗೆ ಸರ್ವಪತನ ಕಂಡಿತು.
ಇಂಗ್ಲೆಂಡ್: 9 ವಿಕೆಟ್‌ಗೆ 337 (ಮಲಾನ್ 31, ಬೇರ್ ಸ್ಟೋ 59, ರೂಟ್ 60, ಸ್ಟೋಕ್ಸ್ 84, ಬಟ್ಲರ್ 27, ಬ್ರೂಕ್ 30, ರ್ೌ 64ಕ್ಕೆ3, ಆಫ್ರಿದಿ 72ಕ್ಕೆ 2). ಪಾಕಿಸ್ತಾನ: 43.3 ಓವರ್‌ಗಳಲ್ಲಿ 244 (ಬಾಬರ್ 38, ರಿಜ್ವಾನ್ 36, ಶಕೀಲ್ 29, ಸಲ್ಮಾನ್ 51, ಆಫ್ರಿದಿ 25, ರ್ೌ 35, ವಿಲ್ಲಿ 56ಕ್ಕೆ3, ರಶೀದ್ 55ಕ್ಕೆ 2).
533: ಪಾಕ್ ವೇಗಿ ಹ್ಯಾರಿಸ್ ರ್ೌ (533) ಏಕದಿನ ವಿಶ್ವಕಪ್ ಆವೃತಿಯೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎನಿಸಿದರು. 2019ರಲ್ಲಿ ಇಂಗ್ಲೆಂಡ್‌ನ ಆದಿಲ್ ರಶೀದ್ 526 ರನ್ ಬಿಟ್ಟುಕೊಟ್ಟಿದ್ದು ಹಿಂದಿನ ಗರಿಷ್ಠ. ಹಾಲಿ ಆವೃತ್ತಿಯಲ್ಲಿ ಶ್ರೀಲಂಕಾದ ದಿಲ್ಶಾನ್ ಮಧುಶಂಕ 525 ರನ್ ನೀಡಿದ್ದಾರೆ.
1: ಜೋ ರೂಟ್ (1,034) ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿದರು. ಗ್ರಹಾಂ ಗೋಚ್ (769), ಬೆನ್ ಸ್ಟೋಕ್ಸ್ (747) ನಂತರದ ಸ್ಥಾನದಲ್ಲಿದ್ದಾರೆ.