ಕ್ರೋವ್-ಥೋರ್ಪೆ ಟ್ರೋಫಿ ಗೆದ್ದ ಇಂಗ್ಲೆಂಡ್: ಕಿವೀಸ್‌ಗೆ ತವರಿನಲ್ಲಿಯೇ ಮುಖಭಂಗ

New Project (2)
Published on

ವೆಲ್ಲಿಂಗ್ಟನ್: ಅನುಭವಿ ಬ್ಯಾಟರ್ ಜೋ ರೂಟ್ (106 ರನ್, 130 ಎಸೆತ, 11 ಬೌಂಡರಿ) ಸಿಡಿಸಿದ 36ನೇ ಟೆಸ್ಟ್ ಶತಕ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ 323 ರನ್‌ಗಳಿಂದ ನ್ಯೂಜಿಲೆಂಡ್ ವಿರುದ್ಧ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಬೆನ್ ಸ್ಟೋಕ್ಸ್ ಪಡೆ 3 ಪಂದ್ಯಗಳ ಕ್ರೋವ್-ಥೋರ್ಪೆ ಟ್ರೋಫಿ ಟೆಸ್ಟ್ ಸರಣಿಯಲ್ಲಿ 2-0 ಗೆಲುವು ಸಾಧಿಸಿದೆ.

ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 5 ವಿಕೆಟ್‌ಗೆ 378 ರನ್‌ಗಳಿಂದ 4ನೇ ದಿನದ ಆಟ ಆರಂಭಿಸಿದ ಇಂಗ್ಲೆಂಡ್, 82.3 ಓವರ್‌ಗಳಲ್ಲಿ 6 ವಿಕೆಟ್‌ಗೆ 427 ರನ್‌ಗಳಿಸಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಪ್ರತಿಯಾಗಿ ವಿಕೆಟ್ ಕೀಪರ್-ಬ್ಯಾಟರ್ ಟಾಮ್ ಬ್ಲಂಡೆಲ್ (115 ರನ್, 102 ಎಸೆತ, 13 ಬೌಂಡರಿ, 5 ಸಿಕ್ಸರ್) ಶತಕದ ಹೋರಾಟದ ನಡುವೆಯೂ ನ್ಯೂಜಿಲೆಂಡ್ 54.2 ಓವರ್‌ಗಳಲ್ಲಿ 259 ರನಗಳಿಗೆ ಸರ್ವಪತನ ಕಂಡಿತು.

ಇಂಗ್ಲೆಂಡ್: 280 ಹಾಗೂ 2.3 ಓವರ್‌ಗಳಲ್ಲಿ 427/6 ಡಿಕ್ಲೇರ್ (ಜೋ ರೂಟ್ 106, ಸ್ಟೋಕ್ಸ್ 19*, ಟಿಮ್ ಸೌಥಿ 72ಕ್ಕೆ 2). ನ್ಯೂಜಿಲೆಂಡ್: 125 ಹಾಗೂ 259 (ಲಾಥಮ್ 24, ಡೆರಿಲ್ 32, ಬ್ಲಂಡೆಲ್ 115, ಸ್ಮಿತ್ 42, ಸ್ಟೋಕ್ಸ್ 5ಕ್ಕೆ 3, ವೋಕ್ಸ್ 20ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net