

ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಶನಿವಾರ ಬೆಳಗ್ಗೆ ಬಿದ್ದ ಮಳೆಯಿಂದಾಗಿ 3ನೇ ದಿನದಾಟದಲ್ಲಿ ಒಂದು ಎಸೆತ ಆಟ ನಡೆಯಲಿಲ್ಲ. ಇದರಿಂದ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಯತ್ನದಲ್ಲಿದ್ದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆಯುಂಟಾಗಿದೆ.
ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ 9 ವಿಕೆಟ್ಗೆ 469 ರನ್ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರೆ, ಪ್ರವಾಸಿ ವೆಸ್ಟ್ ಇಂಡೀಸ್ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ಗೆ 32 ರನ್ ಗಳಿಸಿದ್ದು, ಇನ್ನೂ 437 ರನ್ ಹಿನ್ನಡೆಯಲ್ಲಿದೆ. ಕ್ರೇಗ್ ಬ್ರಾಥ್ವೇಟ್ (6) ಹಾಗೂ ಅಲ್ಜಾರಿ ಜೋಸೆಫ್ (14) ಕ್ರೀಸ್ನಲ್ಲಿದ್ದಾರೆ. ಮಳೆಯಿಂದಾಗಿ ಪಂದ್ಯದ ಮೊದಲ ದಿನದಾಟ 90 ನಿಮಿಷ ತಡವಾಗಿ ಆರಂಭಗೊಂಡಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ 1-0ಯಿಂದ ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್: 162 ಓವರ್ಗಳಲ್ಲಿ 9 ವಿಕೆಟ್ಗೆ 469 ಡಿಕ್ಲೇರ್ (ಸಿಬ್ಲೆ 120, ಸ್ಟೋಕ್ಸ್ 176, ಬಟ್ಲರ್ 40, ಚೇಸ್ 172ಕ್ಕೆ 5, ರೋಚ್ 58ಕ್ಕೆ 2), ವೆಸ್ಟ್ ಇಂಡೀಸ್: 14 ಓವರ್ಗಳಲ್ಲಿ 1 ವಿಕೆಟ್ಗೆ 32 (ಬ್ರಾಥ್ ವೇಟ್ 6, ಕ್ಯಾಂಪ್ಬೆಲ್ 12, ಕರ್ರನ್ 8ಕ್ಕೆ 1).