

ಸೌಥಾಂಪ್ಟನ್: ವೆಸ್ಟ್ ಇಂಡೀಸ್ ವೇಗಿಗಳ ದಾಳಿಗೆ ಮೊದಲ ಇನಿಂಗ್ಸ್ನಲ್ಲಿ ಆಘಾತ ಅನುಭವಿಸಿ ಹಿನ್ನಡೆ ಅನುಭವಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರತಿಹೋರಾಟ ನಡೆಸಿದೆ. ದ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 114 ರನ್ ಹಿನ್ನಡೆಯೊಂದಿಗೆ 1 ವಿಕೆಟ್ಗೆ 15 ರನ್ಗಳಿಂದ ನಾಲ್ಕನೇ ದಿನದಾಟ ಆರಂಭಿಸಿರುವ ಇಂಗ್ಲೆಂಡ್ ದಿನದಾಟದ ಚಹಾ ವಿರಾಮದ ವೇಳೆಗೆ 3 ವಿಕೆಟ್ಗೆ 168 ರನ್ ಪೇರಿಸಿದ್ದು, 54 ರನ್ ಮುನ್ನಡೆಯಲ್ಲಿದೆ.
10 ರನ್ಗಳಿಂದ ರೋರಿ ಬರ್ನ್ಸ್ ಹಾಗೂ 5 ರನ್ಗಳಿಂದ ಇನಿಂಗ್ಸ್ ಆರಂಭಿಸಿದ ಡೊಮಿನಿಕ್ ಸಿಬ್ಲೆ ಜೋಡಿ ದಿನದ ಆರಂಭದಲ್ಲೇ ಯಾವುದೇ ಅಪಾಯವಾಗಂತೆ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ಮೊದಲ ವಿಕೆಟ್ಗೆ 72 ರನ್ ಪೇರಿಸಿದ್ದ ಈ ಜೋಡಿಯನ್ನು ವಿಂಡೀಸ್ ವೇಗಿ ರೋಸ್ಟನ್ ಚೇಸ್ ಬೇರ್ಪಡಿಸಿದರು. ಬನ್ಸ್ ನಿರ್ಗಮನದ ಬಳಿಕ ಡೊಮಿನಿಕ್ ಸಿಬ್ಲೆ (50ರನ್, 164 ಎಸೆತ, 4 ಬೌಂಡರಿ) ಹಾಗೂ ಜೋ ಡೆನ್ಲೆ (29ರನ್, 70 ಎಸೆತ, 3 ಬೌಂಡರಿ) ಜೋಡಿ 2ನೇ ವಿಕೆಟ್ಗೆ 41ರನ್ ಪೇರಿಸಿ ಬೇರ್ಪಟ್ಟರೆ, ಈ ಜೋಡಿ ಪ್ರವಾಸಿ ತಂಡದ ಇನಿಂಗ್ಸ್ ಮುನ್ನಡೆ ಚುಕ್ತಾ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತು. ಮಂದಗತಿ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಆರಂಭಿಕ ಡೊಮಿನಿಕ್ ಸಿಬ್ಲೆ ಅರ್ಧಶತಕ ಪೂರೈಸಿದ ಬೆನ್ನಲ್ಲೇ ನಿರ್ಗಮಿಸಿದರು. ಜಾಕ್ ಕ್ರೌವ್ಲೆ (38ರನ್, 68 ಎಸೆತ, 3 ಬೌಂಡರಿ) ಹಾಗೂ 15 ಎಸೆತ ಎದುರಿಸಿದರೂ ಇನ್ನು ಖಾತೆ ತೆರೆಯದ ನಾಯಕ ಬೆನ್ ಸ್ಟೋಕ್ಸ್ ಕ್ರಿಸ್ನಲ್ಲಿದ್ದಾರೆ. 117 ದಿನಗಳ ಪುನರಾರಂಭಗೊಂಡ ಮೊದಲ ಕ್ರಿಕೆಟ್ ಸರಣಿ ಇದಾಗಿದ್ದು, ಮೊದಲ ಪಂದ್ಯವೇ ನೀರಸ ಡ್ರಾನತ್ತ ಸಾಗಿದೆ.
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ : 204 ಮತ್ತು ದ್ವೀತಿಯ ಇನಿಂಗ್ಸ್ : 4ನೇ ದಿನದಾಟದ ಚಹಾವಿರಾಮದ ವೇಳೆಗೆ 3 ವಿಕೆಟ್ಗೆ 168 (ರೋರಿ ಬರ್ನ್ಸ್ 42, ಡೊಮಿನಿಕ್ ಸಿಬ್ಲೆ 50, ಡೆನ್ಲೆ 29, ಜಾಕ್ ಕ್ರೌವ್ಲೆ 38, ರೋಸ್ಟನ್ ಚೇಸ್ 45ಕ್ಕೆ 2) ವೆಸ್ಟ್ ಇಂಡೀಸ್ ಪ್ರಥಮ ಇನಿಂಗ್ಸ್: 318