ಆತಿಥೇಯ ಶ್ರೀಲಂಕಾ ಎದುರು ಇನಿಂಗ್ಸ್ ಮುನ್ನಡೆಯತ್ತ ಇಂಗ್ಲೆಂಡ್

joe root and bess for web
Published on

ಗಾಲೆ: ಆಫ್ ಸ್ಪಿನ್ನರ್ ಡಾಮ್ ಬೆಸ್ (30ಕ್ಕೆ 5) ಮಾರಕ ದಾಳಿ ಹಾಗೂ ನಾಯಕ ಜೋ ರೂಟ್ (66*ರನ್, 115 ಎಸೆತ, 5 ಬೌಂಡರಿ) ಅರ್ಧ ಶತಕದಾಟದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎದುರು ಇನಿಂಗ್ಸ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಗಾಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 135 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 127 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 8 ರನ್ ಬಾಕಿ ಇದೆ.

ಶ್ರೀಲಂಕಾ: 46.1 ಓವರ್‌ಗಳಲ್ಲಿ 135 (ಕುಸಾಲ್ ಪೆರೇರಾ 20, ದಿನೇಶ್ ಚಾಂಡಿಮಾಲ್ 28, ಏಂಜೆಲೊ ಮ್ಯಾಥ್ಯೂಸ್ 27, ದಸುನ್ ಶನತ 23, ಡಾಮ್ ಬೆಸ್ 30ಕ್ಕೆ 5, ಸ್ಟುವರ್ಟ್ ಬ್ರಾಡ್ 20ಕ್ಕೆ 3, ಜಾಕ್ ಲೀಚ್ 55ಕ್ಕೆ 1), ಇಂಗ್ಲೆಂಡ್: 41 ಓವರ್‌ಗಳಲ್ಲಿ 2 ವಿಕೆಟ್‌ಗೆ 127 (ಜೋ ರೂಟ್ 66*, ಜಾನಿ ಬೇರ್‌ಸ್ಟೋ 47*, ಲಸಿತ್ ಎಂಬುಲ್ಡೆನಿಯಾ 55ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net