ಪಾಕಿಸ್ತಾನ ತಂಡಕ್ಕೆ ಇನಿಂಗ್ಸ್​ ಮುನ್ನಡೆ

yasri shah for web
Published on

ಮ್ಯಾಂಚೆಸ್ಟರ್​:  ಸ್ಪಿನ್ನರ್​ಗಳಾದ ಯಾಸೀರ್​ ಷಾ (66ಕ್ಕೆ 4) ಹಾಗೂ ಶಾದಾಬ್​ ಖಾನ್​ (13ಕ್ಕೆ 2) ಮಾರಕ ದಾಳಿಗೆ ನಲುಗಿದ ಆತಿಥೇಯ ಇಂಗ್ಲೆಂಡ್​ ತಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ತಂಡದ ಎದುರು 107ರನ್​ ಹಿನ್ನಡೆ ಅನುಭವಿಸಿದೆ. ಓಲ್ಡ್​ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4 ವಿಕೆಟ್​ಗೆ 92 ರನ್​ಗಳಿಂದ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್​ ತಂಡ, ಓಲಿ ಪೋಪ್​ (62ರನ್​, 117 ಎಸೆತ, 8 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್​ ನಡುವೆಯೂ 70.3 ಓವರ್​ಗಳಲ್ಲಿ 219 ರನ್​ಗಳಿಗೆ ಸರ್ವಪತನ ಕಂಡಿತು. ಇನಿಂಗ್ಸ್​ ಮುನ್ನಡೆಯೊಂದಿಗೆ 2ನೇ ಸರದಿ ಬ್ಯಾಟಿಂಗ್​ ಆರಂಭಿಸಿರುವ ಪಾಕಿಸ್ತಾನ ಶುಕ್ರವಾರದ ಚಹಾ ವಿರಾಮದ ವೇಳೆಗೆ 1 ವಿಕೆಟ್​ಗೆ 20 ರನ್​ ಪೇರಿಸಿದ್ದು, ಒಟ್ಟಾರೆ 127 ರನ್​ ಮುನ್ನಡೆಯಲ್ಲಿದೆ. ಪ್ರವಾಸಿ ಪಾಕ್​ ತಂಡ ಮೊದಲ ಇನಿಂಗ್ಸ್​ 326 ರನ್​ ಗಳಿಸಿತ್ತು. ಮೊದಲ ಇನಿಂಗ್ಸ್ ಶತಕದ ಸಾಧಕ ಶಾನ್ ಮಸೂದ್ 11 ಎಸೆತ ಎದುರಿಸಿದರೂ ಖಾತೆ ತೆರೆಯಲು ವಿಫಲರಾದರು.

ಪಾಕಿಸ್ತಾನ: 326 ಮತ್ತು 2ನೇ ಇನಿಂಗ್ಸ್​ನಲ್ಲಿ ಮೂರನೇ ದಿನದಾಟದ ಚಹಾವಿರಾಮದ ವೇಳೆಗೆ 9 ಓವರ್​ಗಳಲ್ಲಿ 1 ವಿಕೆಟ್​ಗೆ 20 (ಅಬಿದ್ ಅಲಿ 15, ಬ್ರಾಡ್ 2ಕ್ಕೆ 1), ಇಂಗ್ಲೆಂಡ್​: 70.3 ಓವರ್​ಗಳಲ್ಲಿ 219 (ಪೋಪ್​ 62, ಬಟ್ಲರ್​ 38, ವೋಕ್ಸ್​ 19, ಮೊಹಮದ್​ ಅಬ್ಬಾಸ್​ 33ಕ್ಕೆ 2, ಶಾಹೀನ್​ ಅಫ್ರಿದಿ 51ಕ್ಕೆ 1, ನಸೀಮ್​ ಷಾ 44ಕ್ಕೆ 1, ಯಾಸೀರ್​ ಷಾ 66ಕ್ಕೆ 4, ಶಾದಾಬ್​ ಖಾನ್​ 13ಕ್ಕೆ 2)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net