VIDEO: ಇಂಗ್ಲೆಂಡ್​ - ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ

eng and pak match for web
Published on

ಸೌಥಾಂಪ್ಟನ್​: ಪ್ರವಾಸಿ ಪಾಕಿಸ್ತಾನ ಹಾಗೂ ಆತಿಥೇಯ ಇಂಗ್ಲೆಂಡ್​ ನಡುವಿನ 3ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದ ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ದಿ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ 2ನೇ ಸರದಿ ಬ್ಯಾಟಿಂಗ್​ ಆರಂಭಿಸಿದ ಪಾಕಿಸ್ತಾನ ತಂಡ ವಿಕೆಟ್​ ನಷ್ಟವಿಲ್ಲದೆ 41 ರನ್​ ಪೇರಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಭೋಜನ ವಿರಾಮದ ಬಳಿಕವೂ ಪಂದ್ಯಕ್ಕೆ ಮಳೆ ಬಿಡುವು ನೀಡಿಲ್ಲ. ಇಂಗ್ಲೆಂಡ್​ ಮೊದಲ ಇನಿಂಗ್ಸ್​ 8 ವಿಕೆಟ್​ಗೆ 583ರನ್​ ಪೇರಿಸಿದರೆ, ಪಾಕಿಸ್ತಾನ ಮೊದಲ ಇನಿಂಗ್ಸ್​ 273 ರನ್​ ಗಳಿಸಿ ಫಾಲೋಆನ್​ ಅನುಭವಿಸಿತ್ತು. ಪಾಕಿಸ್ತಾನ ಇನಿಂಗ್ಸ್​ ಸೋಲು ತಪ್ಪಿಸಿಕೊಳ್ಳಲು ಇನ್ನು 269 ರನ್​ ಕಲೆಹಾಕಬೇಕಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಯಿಂದ ಮುನ್ನಡೆ ಸಾಧಿಸಿದೆ. ಪಾಕಿಸ್ತಾನ ತಂಡ ಕಳೆದ 10 ವರ್ಷಗಳಿಂದ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಸೋತಿಲ್ಲ.

ಇಂಗ್ಲೆಂಡ್​: 8 ವಿಕೆಟ್​ಗೆ 583 ಡಿಕ್ಲೇರ್​, ಪಾಕಿಸ್ತಾನ: 273 ಮತ್ತು 18 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 41 (ಶಾನ್​ ಮಸೂದ್​ 13, ಅಬಿದ್​ ಅಲಿ 22)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net