

ಸೌಥಾಂಪ್ಟನ್: ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ 2ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವೂ ಮಳೆಯಿಂದ ರದ್ದುಗೊಂಡಿತು. ಸತತ ಎರಡು ದಿನದಾಟ ರದ್ದುಗೊಂಡಂತಾಗಿದೆ. ಸೋಮವಾರ ಅಂತಿಮ ದಿನದಾಟವಾಗಿದ್ದು, ಪಂದ್ಯ ಬಹುತೇಕ ಡ್ರಾಗೊಳ್ಳುವುದು ಖಚಿತವಾಗಿದೆ. ದಿ ರೋಸ್ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 9 ವಿಕೆಟ್ಗೆ 223 ರನ್ಗಳಿಂದ ಭಾನುವಾರದ ಆಟ ಆರಂಭಿಸಿದ ಪಾಕಿಸ್ತಾನ, 91.2 ಓವರ್ಗಳಲ್ಲಿ 236 ರನ್ಗಳಿಗೆ ಸರ್ವಪತನ ಕಂಡಿತು. ಬಳಿಕ ಬ್ಯಾಟಿಂಗ್ ಆರಂಭಿಸಿರುವ ಆತಿಥೇಯ ಇಂಗ್ಲೆಂಡ್ ತಂಡ, 5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 7 ರನ್ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿತು. ಇಂಗ್ಲೆಂಡ್ ತಂಡ ಇನ್ನು 229 ರನ್ ಹಿನ್ನಡೆಯಲ್ಲಿದೆ. ರೋರಿ ಬರ್ನ್ಸ್ (0) ಇನಿಂಗ್ಸ್ನ ಮೊದಲ ಓವರ್ನಲ್ಲೇ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಡೊಮಿನಿಕ್ ಸಿಬ್ಲೆ (2) ಹಾಗೂ ಕ್ರೌಲೆ (5) ಕ್ರೀಸ್ನಲ್ಲಿದ್ದಾರೆ. ಇದಕ್ಕೂ ಮೊದಲು 60 ರನ್ಗಳಿಂದ ದಿನದಾಟ ಆರಂಭಿಸಿದ ಪಾಕಿಸ್ತಾನದ ಮೊಹಮದ್ ರಿಜ್ವಾನ್ (72ರನ್, 139 ಎಸೆತ, 7 ಬೌಂಡರಿ) ದಿನದ ಆರಂಭದಲ್ಲೇ ಸ್ಟುವರ್ಟ್ ಬ್ರಾಡ್ಗೆ ವಿಕೆಟ್ ಒಪ್ಪಿಸಿದರು. ಮಳೆಯಿಂದಾಗಿ ದಿನದ ಮೂರನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 1&0 ಯಿಂದ ಮುನ್ನಡೆ ಸಾಧಿಸಿದೆ.
ಪಾಕಿಸ್ತಾನ ಮೊದಲ ಇನಿಂಗ್ಸ್: 91.2 ಓವರ್ಗಳಲ್ಲಿ 236 (ರಿಜ್ವಾನ್ 72, ಆಂಡರ್ಸನ್ 60ಕ್ಕೆ 3, ಬ್ರಾಡ್ 56ಕ್ಕೆ 4). ಇಂಗ್ಲೆಂಡ್: 5 ಓವರ್ಗಳಲ್ಲಿ 1 ವಿಕೆಟ್ಗೆ 7 (ಸಿಬ್ಲೆ 2, ಜಾಕ್ ಕ್ರೌಲೆ 5, ಶಾಹೀನ್ ಅಫ್ರಿದಿ 5ಕ್ಕೆ 1).
ಪಾಕಿಸ್ತಾನ ಮೊದಲ ಇನಿಂಗ್ಸ್: 91.2 ಓವರ್ಗಳಲ್ಲಿ 236 (ರಿಜ್ವಾನ್ 72, ಆಂಡರ್ಸನ್ 60ಕ್ಕೆ 3, ಬ್ರಾಡ್ 56ಕ್ಕೆ 4). ಇಂಗ್ಲೆಂಡ್: 5 ಓವರ್ಗಳಲ್ಲಿ 1 ವಿಕೆಟ್ಗೆ 7 (ಸಿಬ್ಲೆ 2, ಜಾಕ್ ಕ್ರೌಲೆ 5, ಶಾಹೀನ್ ಅಫ್ರಿದಿ 5ಕ್ಕೆ 1).