ಇಂದು ಇಂಗ್ಲೆಂಡ್-ಐರ್ಲೆಂಡ್ ಮೊದಲ ಏಕದಿನ ಪಂದ್ಯ

england and ireland for web
Published on

ಸೌಥಾಂಪ್ಟನ್: ಕರೊನಾ ವೈರಸ್ ಭೀತಿ ನಡುವೆಯೂ 117 ದಿನಗಳ ಬಳಿಕ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡ ಇಂಗ್ಲೆಂಡ್ ನೆಲದಲ್ಲೇ ಏಕದಿನ ಕ್ರಿಕೆಟ್‌ಗೂ ಚಾಲನೆ ಸಿಗಲಿದೆ. ಮೊದಲ ಟೆಸ್ಟ್ ಸರಣಿಯಲ್ಲೇ ಗೆದ್ದು ಬೀಗಿರುವ ಇಂಗ್ಲೆಂಡ್, ಚೊಚ್ಚಲ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಗುರುವಾರ ಎದುರಿಸಲಿದೆ. ಈ ಟೂರ್ನಿಯೂ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿ ಅರ್ಹತಾ ಭಾಗವಾಗಿದೆ. 12 ಟೆಸ್ಟ್ ಮಾನ್ಯತೆ ಹೊಂದಿರುವ ರಾಷ್ಟ್ರಗಳ ಜತೆಗೆ ನೆದರ್ಲೆಂಡ್ ಸೇರಿದಂತೆ 13 ತಂಡಗಳು ವಿಶ್ವಕಪ್ ಹೋರಾಟದಲ್ಲಿವೆ, ಆತಿಥೇಯ ತಂಡವಾಗಿರುವ ಭಾರತ ನೇರ ಅರ್ಹತೆ ಪಡೆಯಲಿದೆ. ಏಕದಿನ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಗೆಲುವಿನ ೇವರಿಟ್ ತಂಡ ಎನಿಸಿದೆ. ಏವೊಯಿನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ಬಳಗದಲ್ಲಿ ಮೊಯಿನ್ ಅಲಿ, ಜಾನಿ ಬೇರ್‌ಸ್ಟೋ, ಜೇಸರ್ ರಾಯ್, ಡೇವಿಡ್ ವಿಲ್ಲಿರಂಥ ಬಲಿಷ್ಠ ಆಟಗಾರರಿದ್ದಾರೆ. ಮತ್ತೊಂದೆಡೆ, 2023 ಏಕದಿನ ವಿಶ್ವಕಪ್‌ಗೆ ಅರ್ಹತೆ ಮೇಲೆ ಕಣ್ಣಿಟ್ಟಿರುವ ಐರ್ಲೆಂಡ್ ಪ್ರತಿಹೋರಾಟಕ್ಕೆ ಸಜ್ಜಾಗಿದೆ. ಆ.1 ರಂದು 2ನೇ ಏಕದಿನ ಹಾಗೂ ಆ. 4 ರಂದು 3ನೇ ಏಕದಿನ ಪಂದ್ಯ ನಡೆಯಲಿದೆ.
ಪಂದ್ಯ ಆರಂಭ: ಸಂಜೆ 6.30ಕ್ಕೆ
ನೇರ ಪ್ರಸಾರ: ಸ್ಟಾರ್ ಸಿಕ್ಸ್, ಜಿಯೋ ಟಿವಿ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net