ರೂಟ್​ ಶತಕದಾಟ, 387 ರನ್​ಗೆ ಇಂಗ್ಲೆಂಡ್ ಆಲ್​ಔಟ್​! ಟೀಮ್ ಇಂಡಿಯಾ ಪರ ಬುಮ್ರಾ ಮಿಂಚು | IND vs ENG

ವಿಜಯವಾಣಿ (42)
Published on

IND vs ENG: ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಬೆನ್​ ಸ್ಟೋಕ್ಸ್ ಪಡೆ 387 ರನ್​ಗೆ ಆಲ್​ಔಟ್ ಆಗಿದೆ. ತಂಡದ ಪರ​ ಜೋ ರೂಟ್ ಶತಕ ಬಾರಿಸಿದ್ದೇ ಆದರೂ ಉಳಿದ ಆಟಗಾರರು ರೂಟ್​ ಇನ್ನಿಂಗ್ಸ್​ಗೆ ಸಾಥ್​ ನೀಡುವಲ್ಲಿ ವಿಫಲರಾದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್​, 387 ರನ್‌ಗಳಿಗೆ ಆಲೌಟ್ ಆಗಿದೆ. ಎರಡನೇ ದಿನದಾಟವನ್ನು 251/4 ಸ್ಕೋರ್‌ನೊಂದಿಗೆ ಆರಂಭಿಸಿದ ಇಂಗ್ಲೆಂಡ್​ ಬ್ಯಾಟರ್​ಗಳಿಗೆ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಬುಮ್ರಾ ದುಃಸ್ವಪ್ನದಂತೆ ಕಾಡಿದ್ದಾರೆ. ಬರೋಬ್ಬರಿ ಐದು ವಿಕೆಟ್​ಗಳನ್ನು ಕಬಳಿಸುವ ಮೂಲಕ ತಂಡದ ಪರ ಬುಮ್ರಾ ಮಿಂಚಿದ್ದಾರೆ.

ಉಳಿದಂತೆ ನಿತೀಶ್ ಕುಮಾರ್​ ರೆಡ್ಡಿ ಮತ್ತು ಮೊಹಮ್ಮದ್​ ಸಿರಾಜ್ ತಲಾ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್​ ಪರ ಜೋ ರೂಟ್ ಶತಕದಾಟ (104) ತೋರುವ ಮೂಲಕ ಸ್ಟಾರ್ ಆಗಿ ಅಬ್ಬರಿಸಿದರೆ, ಕಾರ್ಸಿ (56) ಮತ್ತು ಜೇಮಿ ಸ್ಮಿತ್ (51) ಅರ್ಧಶತಕಗಳೊಂದಿಗೆ ಮಿಂಚಿದ್ದಾರೆ. ಇನ್ನು ಕ್ಯಾಪ್ಟನ್​ ಬೆನ್ ಸ್ಟೋಕ್ಸ್ (44) ಮತ್ತು ಓಲಿ ಪೋಪ್ (44) ರನ್ ಗಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net