

ಸೌಥಾಂಪ್ಟನ್: ಇನಿಂಗ್ಸ್ ಗೆಲುವಿನ ಕನಸಿನಲ್ಲಿರುವ ಅತಿಥೇಯ ಇಂಗ್ಲೆಂಡ್ ತಂಡಕ್ಕೆ ಮಳೆ ಅಡ್ಡಿಯುಂಟಾಗಿದೆ. ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಅಂತಿಮ ದಿನದಾಟಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಮಂಗಳವಾರ ದಿನದಾಟದ ಚಹಾ ವಿರಾಮದವರೆಗೂ ಒಂದೇ ಒಂದು ಎಸೆತ ಕೂಡ ಆಗಿಲ್ಲ. ಕೊನೇ ಅವಧಿ ಇರುವುದರಿಂದ ಪಂದ್ಯ ಬಹುತೇಕ ಡ್ರಾ ಹಾದಿಯಲ್ಲಿದೆ. ಪಾಕಿಸ್ತಾನ ತಂಡ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು 210 ರನ್ ಗಳಿಸಬೇಕಿದೆ. ಸೋಮವಾರ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 2 ವಿಕೆಟ್ಗೆ 100 ರನ್ಗಳಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಯಿಂದ ಮುನ್ನಡೆ ಸಾಧಿಸಿದೆ. ಪಂದ್ಯ ಡ್ರಾಗೊಂಡರೂ 10 ವರ್ಷಗಳ ಬಳಿಕ ತವರಿನಲ್ಲಿ ಪಾಕಿಸ್ತಾನ ಎದುರು ಸರಣಿ ಜಯಿಸಲಿದೆ. ಆದರೆ, 2-0 ಯಿಂದ ಸರಣಿ ಗೆಲುವಿನ ಇಂಗ್ಲೆಂಡ್ ಕನಸಿಗೆ ಮಳೆ ಅಡ್ಡಿಯುಂಟಾಗಿದೆ.
ಇಂಗ್ಲೆಂಡ್: 8 ವಿಕೆಟ್ಗೆ 583 ಡಿಕ್ಲೇರ್, ಪಾಕಿಸ್ತಾನ: 273 ಮತ್ತು 56 ಓವರ್ಗಳಲ್ಲಿ 2 ವಿಕೆಟ್ಗೆ 100 (ಅಜರ್ ಅಲಿ 29 ಬ್ಯಾಟಿಂಗ್)