

ಹರಾರೆ: ಪ್ರಸ್ತುತ ಜಿಂಬ್ವಾವೆ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಭಾಗವಾಗಿರುವ ಸಂಜು ಸ್ಯಾಮ್ಸನ್ ಇಂದಿನ ಕಡೆಯ ಪಂದ್ಯದಲ್ಲಿ ಜಿಂಬಾಬ್ವೆ ಬೌಲರ್ಗಳಿಗೆ ಬೆವರಿಳಿಸಿದ್ದು, 45 ಎಸೆತಗಳಲ್ಲಿ 58 ರನ್ಗಳನ್ನು ಕಲೆಹಾಕುವ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿದರು. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಸದ್ಯ ಭಾರತದ ತಂಡಕ್ಕೆ ಉಪನಾಯಕನಾಗಿರುವ ಸಂಜು, ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ಮಣಿಸಿ, ವಿಶ್ವಕಪ್ ಗೆದ್ದ ಕ್ಷಣವನ್ನು ಮತ್ತೊಮ್ಮೆ ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ಮಾವಿನಕಟ್ಟೆ ಮಸೀದಿ ಸನಿಹ ಕಾರು ಪಲ್ಟಿ: ಯುವಕ ಮೃತ್ಯು
ತನಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಂಜು ಸ್ಯಾಮ್ಸನ್, "ಬಾರ್ಬಡೋಸ್ನಲ್ಲಿ ಗೆಲುವು ಸಾಧಿಸಿದ ಕ್ಷಣ ಹೇಳತೀರದು. ಅದನ್ನು ನಿಜಕ್ಕೂ ಮರೆಯಲು ಸಾಧ್ಯವೇ ಇಲ್ಲ. ಇಂದಿಗೂ ಸಹ ಅದೇ ತಲೆಯಲ್ಲಿದೆ. ಆಗಾಗ್ಗೆ ಅಲ್ಲಿನ ಸಂಭ್ರಮ ನೆನಪಾಗುತ್ತದೆ. ಅದೆಲ್ಲವೂ ರೋಮಾಂಚಕ. ನಮ್ಮ ಭಾವನೆಗಳಿಗೆ ಅಂದು ಕೊನೆಯಿರಲಿಲ್ಲ. ಊಹೆಗೂ ಮೀರಿದ ಅನುಭವ ಎಂದೇ ಹೇಳಬಹುದು" ಎಂದರು.
"ನನ್ನಲ್ಲಿ ಅಂದಿನಿಂದ ಖುಷಿ ಮಾಸಿಲ್ಲ. ಆ ತಂಡದಲ್ಲಿ ಸ್ಥಾನ ಪಡೆದಿದ್ದು ನನ್ನ ಪುಣ್ಯ. ಗೆಲುವಿಗೆ ತಂಡದಲ್ಲಿದ್ದ ಪ್ರತಿಯೊಬ್ಬರ ಕೊಡುಗೆ ಕೂಡ ಅಪಾರ. ಇದು ಟೀಮ್ ಯಶಸ್ಸು" ಎಂದರು. ಜಿಂಬಾಬ್ವೆ ವಿರುದ್ಧದ ಐದನೇ ಟಿ20 ಪಂದ್ಯಕ್ಕೂ ಮುನ್ನ ಮಾತನಾಡಿದ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್ ಗೆದ್ದ ಕ್ಷಣವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಮೂಲಕ ಭಾವುಕರಾದರು. ಜಿಂಬಾಬ್ವೆ ವಿರುದ್ಧ ಈಗಾಗಲೇ ಸರಣಿ ಗೆದ್ದಿರುವ ಭಾರತ, ಶುಭಮನ್ ಗಿಲ್ ನಾಯಕತ್ವದಲ್ಲಿ ಭರ್ಜರಿ ಜಯ ಸಾಧಿಸಿದೆ.